ನಾಳೆ ‌ಸದನದಲ್ಲಿ ಸಚಿವರೊಬ್ಬರ ಭ್ರಷ್ಟಾಚಾರ ದಾಖಲೆಗಳು ಬಿಡುಗಡೆ: ಎಚ್‌ಡಿಕೆ

ಹೊಸದಿಗಂತ ವರದಿ, ಕಲಬುರಗಿ
ಸಾರ್ವಜನಿಕ ಹಿತಾಸಕ್ತಿ ಬಲಿಕೊಟ್ಟು, ಕಾನೂನು ಗಾಳಿಗೆ ತೂರಿ ಆಸ್ತಿಯನ್ನು ಮಾಡಿಕೊಂಡಿರುವ ರಾಜ್ಯದ ಸಚಿವರೊಬ್ಬರ ಹಗರಣಗಳ ಬಗ್ಗೆ ನಾಳೆ ಗುರುವಾರ ವಿಧಾನಸಭೆ ಅಧಿವೇಶನದಲ್ಲಿ ದಾಖಲೆ ಗಳನ್ನು ಬಿಡುಗಡೆಗೊಳಿಸಿ ಭ್ರಷ್ಟಾಚಾರ ಬಯಲಿಗೆಳೆಯಲಾಗುವುದಾಗಿ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಹೊಸ ಬಾಂಬ್‌ ಸಿಡಿಸಿದ್ದಾರೆ.
ಕಲಬುರಗಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯ ಸರ್ಕಾರದ ಶೇ. 40 ಭ್ರಷ್ಟ್ರಾಚಾರದ ಬಗ್ಗೆ ಈಗಾಗಲೇ ಸಾರ್ವಜನಿಕರಿಗೆ ಅನುಭವವಾಗಿದೆ. ಈಗ ತಾವು ಬಿಡುಗಡೆ ಮಾಡಲಿರುವ ದಾಖಲೆಗಳು ಸಚಿವರೊಬ್ಬರ ಕರ್ಮಕಾಂಡವಾಗಿದ್ದು, ನಾಳೆ ಸದನದಲ್ಲಿ ಈ ವಿಷಯದ ಬಗ್ಗೆ ಸರ್ಕಾರ ಉತ್ತರಿಸಲಿ ಎಂದು ಗುಡುಗಿದ್ದಾರೆ. ನನ್ನನ್ನು ಕೆಣಕಿದವರಿಗೆ ಇದು ಪ್ರತ್ಯುತ್ತರ ಎಂದು ಅವರು ಹೇಳಿದರು.
ರೈತರ ಸಬ್ಸಿಡಿ ಹಣದಲ್ಲೂ ಪರ್ಸೆಂಟೆಜ್ ಪಡೆದಿರುವುದು ಹಾಗೂ ಅಧಿಕಾರಿಗಳು ತಮ್ಮ ಮಾತು ಕೇಳುತ್ತಿಲ್ಲ ಎಂದು ಸಚಿವರೊಬ್ಬರು ಸದನದಲ್ಲೇ ಹೇಳಿರುವುದು ಸರ್ಕಾರದ ಕಾರ್ಯವೈಖರಿಗೆ ಹಿಡಿದ ಕನ್ನಡಿ ಎಂದರು.

ದೇವೇಗೌಡರ ಆರೋಗ್ಯದಲ್ಲಿ ಚೇತರಿಕೆ:
ತಂದೆಯವರಾದ ಎಚ್.ಡಿ. ದೇವೇಗೌಡರ ಆರೋಗ್ಯದಲ್ಲಿ ಚೇತರಿಕೆಯಾಗಿದೆ. ರಾಜಕೀಯ ಗಣ್ಯರು ಆರೋಗ್ಯ ವಿಚಾರಣೆಗೆ ಭೇಟಿ ಮಾಡುತ್ತಿದ್ದಾರೆ. ಇದರಲ್ಲಿ ಯಾವುದೇ ರಾಜಕೀಯ ಚರ್ಚೆಯಾಗಿಲ್ಲ ಎಂದು ಇದೇ ಸಂದರ್ಭದಲ್ಲಿ ಸ್ಪಷ್ಟ ಪಡಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!