ಚೀನಾಗೆ ಕಾಡುತ್ತಿದೆ ಈ ಕುರಿತ ಭಯ: ಸುಂದರ ಹುಡುಗ, ಹುಡುಗಿಯರಿಗೆ ನೀಡಿದ್ರು ಎಚ್ಚರಿಕೆಯ ಸಂದೇಶ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚೀನಾಗೆ ಈಗ ಬೇಹುಗಾರಿಕೆಯ ಭಯ ಶುರುವಾಗಿದ್ದು, ಅಮೂಲ್ಯವಾದ ಮಾಹಿತಿಗಳು, ಭದ್ರತೆಯ ವಿಚಾರಗಳು ಲೀಕ್ ಆಗಿ ಹೋಗುವ ಆತಂಕ ಮನೆ ಮಾಡಿದೆ.

ಇದೇ ಕಾರಣದಿಂದಾಗಿ ಚೀನಾದ ಟಾಪ್ ಬೇಹುಗಾರಿಕಾ ಸಂಸ್ಥೆಗಳು ತನ್ನ ದೇಶದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಒಂದು ಖಡಕ್ ಸಂದೇಶವನ್ನು ರವಾನಿಸಿದೆ. ಸೋಷಿಯಲ್ ಮಿಡಿಯಾಗಳಲ್ಲಿ ಸಿಗುವ ಸುಂದರ ಹುಡುಗಿ ಹಾಗೂ ಚೆಂದದ ಹುಡುಗರೊಂದಿಗೆ ಅಂತರ ಕಾಯ್ದುಕೊಳ್ಳಿ. ತುಂಬಾ ಆತ್ಮೀಯವಾಗಿ ಅವರೊಂದಿಗೆ ಬೆರೆಯಬೇಡಿ ಎಂದು ಸೂಚನೆ ನೀಡಿದೆ.

ಚೀನಾದ ರಾಜ್ಯ ಭದ್ರತಾ ಸಚಿವಾಲಯ ವಿಚಾಟ್​ ಮೂಲಕ ದೇಶದ ಎಲ್ಲಾ ವಿದ್ಯಾರ್ಥಿಗಳಿಗೂ ಸಂದೇಶ ಕಳುಹಿಸಿದೆ. ಹಲವು ದೇಶದ ಹಲವು ಬೇಹುಗಾರಿಕೆ ಸಂಸ್ಥೆಗಳು ನಮ್ಮ ದೇಶದ ಡಾಟಾವನ್ನು ಕದಿಯಲು ಸಜ್ಜಾಗಿವೆ. ನಿಮ್ಮನ್ನು ಹೇಗಾದರೂ ಹೊಂಚು ಹಾಕಿ ನಿಮ್ಮನ್ನು ಮರಳು ಮಾಡಿ ದೇಶದ ಭದ್ರತಾ ವಿಷಯವನ್ನು ನಿಮ್ಮಿಂದ ಪಡೆಯುತ್ತಾರೆ. ಹೀಗಾಗಿ ಅಪರಿಚಿತ ಸುಂದರ ಹುಡುಗ ಹುಡುಗಿಯರೊಂದಿಗೆ ದೂರ ಇರಿ ಅತಿ ಆತ್ಮೀಯತೆ ಅವರೊಂದಿಗೆ ಬೇಡ ಎಂದು ಎಚ್ಚರಿಸಿದೆ.

ಹೊಸದನ್ನು ಕಲಿಯಲು ಉತ್ಸಾಹವಿರುವ ವಿಪರೀತ ಕುತೂಹಲ ಇರುವ ಯುವ ಸಮುದಾಯವನ್ನೇ ಅವು ಗುರಿಯಾಗಿಟ್ಟುಕೊಂಡು ಕುತಂತ್ರ ನಡೆಸುತ್ತಿವೆ. ಚೀನಾಗೆ ಈ ತರಹದ ರಾಷ್ಟ್ರೀಯ ಭದ್ರತೆಗೆ ಈಗ ಅಪಾಯ ಬಂದೊದಗಿದೆ.

ಹೀಗಾಗಿ ಪದೇ ಪದೇ ಈ ರೀತಿಯ ಎಚ್ಚರಿಕೆಯನ್ನು ನಿಮಗೆ ನೀಡಬೇಕಾಗಿ ಬಂದಿದೆ ಎಂದು ಚೀನಾದ ಅತ್ಯುನ್ನತ ಬೇಹುಗಾರಿಕಾ ಸಂಸ್ಥೆಗಳು ತನ್ನ ಸಂದೇಶದಲ್ಲಿ ಹೇಳಿದೆ.

ಮಾರ್ಕೆಟ್ ರಿಸರ್ಚ್ ಹೆಸರಲ್ಲಿ ನಿಮಗೆ ದುಡ್ಡು ನೀಡುವ ಆಸೆ ನೀಡಿ ನಿಮ್ಮಿಂದ ದೇಶದ ಬಗ್ಗೆ ದೇಶದ ಅನೇಕ ವಿಷಯಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಾರೆ. ಸೂಕ್ಷ್ಮ ವೈಜ್ಞಾನಿಕ ಸಂಶೋಧನೆಗಳ ಮಾಹಿತಿ, ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳಿಂದ ಪಡೆಯುವ ಹುನ್ನಾರ ನಡೆಯುತ್ತಿದೆ. ಹೀಗಾಗಿ ತುಂಬಾ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!