ಹೊಸದಿಗಂತ ಡಿಜಿಟಲ್ ಡೆಸ್ಕ್:
ಎರಡೂ ರಾಷ್ಟ್ರಗಳ ನಡುವಿನ ಸಂಬಂಧವನ್ನು ಬಲಪಡಿಸುವ ನಿಟ್ಟಿನಲ್ಲಿ ಚೀನಾ ಮಹತ್ವದ ಹೆಜ್ಜೆ ಇಟ್ಟಿದೆ. ಭಾರತದಲ್ಲಿರುವ ಚೀನೀ ರಾಯಭಾರ ಕಚೇರಿಯು ಈ ವರ್ಷದ ಜನವರಿ 1 ರಿಂದ ಏಪ್ರಿಲ್ 9ರ ವರೆಗೆ ಭಾರತೀಯ ನಾಗರಿಕರಿಗೆ 85,000 ಕ್ಕೂ ಹೆಚ್ಚು ವೀಸಾಗಳನ್ನು ನೀಡಿದೆ.
ಈ ವರ್ಷ ಚೀನಾಕ್ಕೆ ಪ್ರಯಾಣಿಸುವ ಭಾರತೀಯ ನಾಗರಿಕರಿಗೆ 85,000 ಕ್ಕೂ ಹೆಚ್ಚು ವೀಸಾಗಳನ್ನು ನೀಡಿವೆ. ಹೆಚ್ಚಿನ ಭಾರತೀಯ ಸ್ನೇಹಿತರು ಚೀನಾಕ್ಕೆ ಭೇಟಿ ನೀಡಲು, ಸ್ನೇಹಪರ ಚೀನಾಗೆ ಸ್ವಾಗತ ಎಂದು ಚೀನಾದ ರಾಯಭಾರ ಕಚೇರಿ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದೆ.
ಟ್ರಂಪ್ ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ಹಲವು ದೇಶಗಳ ಮೇಲೆ ಟ್ಯಾರಿಫ್ ಅಸ್ತ್ರ ಪ್ರಯೋಗಿಸಿದ್ದಾರೆ. ಚೀನಾ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಪ್ರತಿಸುಂಕ ವಿಧಿಸಿದ್ದಾರೆ. ಈ ಬೆನ್ನಲ್ಲೇ ಚೀನಾವು ಭಾರತದ ಜೊತೆ ಉತ್ತಮ ಸಂಬಂಧಕ್ಕೆ ಹೆಚ್ಚಿನ ಆದ್ಯತೆ ನೀಡಿದೆ.