ಚೀನಾದಲ್ಲಿ ತಯಾರಾದ ಕಾರನ್ನು ಇಲ್ಲಿ ಮಾರುವ ಟೆಸ್ಲಾ ಪ್ರಸ್ತಾಪ ನಮಗೆ ಸಮ್ಮತವಲ್ಲ- ನಿತಿನ್ ಗಡ್ಕರಿ

ಹೊಸದಿಗಂತ ಡಿಜಿಟಲ್ ಡೆಸ್ಕ್

ಎಲಾನ್ ಮಸ್ಕ್ ಅವರ ಟೆಸ್ಲಾ ಕಂಪನಿ ಭಾರತಕ್ಕೆ ಬರುವುದಕ್ಕೆ ಏನಡ್ಡಿ ಎಂಬುದಕ್ಕೆ ಕೇಂದ್ರ ಸಚಿವ ನಿತಿನ್ ಗಡ್ಕರಿ ನಿಖರ ಉತ್ತರ ನೀಡಿದ್ದಾರೆ.

ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದ್ದಿಷ್ಟು-

  • ಟೆಸ್ಲಾ ಇಲ್ಲಿಗೆ ಬರುವುದಕ್ಕೆ ನಮಗೆ ಸ್ವಾಗತವಿದೆ. ಆದರೆ ಎಲಾನ್ ಮಸ್ಕ್ ತಾವು ಚೀನಾದಲ್ಲಿ ತಯಾರಿಸಿದ ಕಾರನ್ನು ಇಲ್ಲಿ ತಂದು ಮಾರುತ್ತೇವೆ ಎನ್ನುತ್ತಿರುವುದು ನಮಗೆ ಸಮ್ಮತವಿಲ್ಲ. ಇಲ್ಲೇ ಕಾರ್ಖಾನೆ ತೆಗೆಯಲಿ, ಅವರಿಗೆ ಬೇಕಿರುವ ಬಿಡಿಭಾಗ ಪೂರೈಕೆ ಸೇರಿದಂತೆ ಎಲ್ಲವೂ ಇಲ್ಲಿದೆ.
  • ಟೊಯೊಟಾ, ಹುಂಡೈ ಸೇರಿದಂತೆ ಜಗತ್ತಿನ ದಿಗ್ಗಜ ಅಟೊಮೊಬೈಲ್ ಬ್ರಾಂಡ್ ಗಳೆಲ್ಲವೂ ಇಲ್ಲಿಯೇ ತಮ್ಮ ಉತ್ಪಾದನಾ ಘಟಕ ಹೊಂದಿವೆ. ಏಕೆಂದರೆ ಭಾರತ ಒಂದು ಅತ್ಯಾಕರ್ಷಕ ಮಾರುಕಟ್ಟೆ. ಇಲ್ಲಿಯೇ ಉತ್ಪಾದನೆಗೆಂದು ಬರುವ ಯಾರಿಗೇ ಆದರೂ ಸ್ವಾಗತವಿದೆ. ಮಸ್ಕ್ ಕಂಪನಿ ಜತೆ ಸಹ ಭಾರತ ಸರ್ಕಾರ ನಿರಂತರ ಮಾತುಕತೆ ನಡೆಸಿದೆ. ಆದರೆ ಚೀನಾದಲ್ಲಿ ತಯಾರಾದ ಕಾರನ್ನು ಇಲ್ಲಿ ಮಾರುವುದಕ್ಕಷ್ಟೇ ಅವಕಾಶ ನೀಡಲಾಗದು.
  • ಇಲ್ಲಿನ ತೆರಿಗೆಯಲ್ಲಿ ವಿನಾಯತಿ ಬೇಕೆಂಬ ಟೆಸ್ಲಾ ಬೇಡಿಕೆ ಈಡೇರಿಸುವುದು ಕಷ್ಟ. ಏಕೆಂದರೆ, ಉಳಿದೆಲ್ಲ ಕಂಪನಿಗಳು ಒಂದು ತೆರಿಗೆ ನೀತಿ ಅಡಿಯಲ್ಲಿ ಕೆಲಸ ಮಾಡುತ್ತಿವೆ, ಹೂಡಿಕೆ ಮಾಡಿವೆ. ಹೀಗಿರುವಾಗ ಒಂದು ಕಂಪನಿಗೆ ಮಾತ್ರ ವಿನಾಯತಿ ನೀಡುವುದು ಹೇಗೆ ಸಾಧ್ಯ?

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!