Sunday, December 3, 2023

Latest Posts

ಅರುಣಾಚಲ ಪ್ರದೇಶದ ಕ್ರೀಡಾಪಟುಗಳಿಗೆ ಚೀನಾಕ್ಕೆ ‘ನೋ ಎಂಟ್ರಿ’: ಭಾರತ ಆಕ್ರೋಶ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅರುಣಾಚಲ ಪ್ರದೇಶದ ಕ್ರೀಡಾಪಟುಗಳಿಗೆ ಚೀನಾ ಪ್ರವೇಶ ನಿರಾಕರಣೆ ಮಾಡಿದ್ದು, ಭಾರತ ತೀವ್ರ ಪ್ರತಿಭಟನೆ ನಡೆಸಿದೆ.

ಹ್ಯಾಂಗ್ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನಲ್ಲಿ ಅರುಣಾಚಲ ಪ್ರದೇಶದ ಕ್ರೀಡಾಪಟುಗಳಿಗೆ ಮಾನ್ಯತೆ ನೀಡಿಲ್ಲ. ಇದು ಕ್ರೀಡಾಕೂಟ ಹಾಗೂ ಅದರ ನೀತಿಸಂಹಿತೆಯ ಸ್ಫೂರ್ತಿಯನ್ನು ಹಾಳುಮಾಡುತ್ತಿದೆ ಎಂದು ಭಾರತ ಆಕ್ರೋಶ ವ್ಯಕ್ತಪಡಿಸಿದೆ.

ಅರುಣಾಚಲ ಪ್ರದೇಶದ ಮೂವರು ಸಮರ ಕಲೆ ಕುಸ್ತಿಪಟುಗಳಿಗೆ ಹ್ಯಾಂಗ್ಝೌ ಏಷ್ಯನ್ ಗೇಮ್ಸ್ ಆಯೋಜನ ಸಮಿತಿಯು ಕ್ರೀಡಾಕೂಟದಲ್ಲಿ ಭಾಗವಹಿಸಲು ಅನುಮೋದನೆ ನೀಡಿತ್ತು. ಅಥ್ಲೀಟ್‌ಗಳು ಮಾರ್ಷಲ್ ಆರ್ಟ್ಸ್ ಕ್ರೀಡೆಯ ವೈಯಕ್ತಿಕ ವಿಭಾಗಗಳಲ್ಲಿ ಭಾಗವಹಿಸಬೇಕಿತ್ತು.

ಚೀನಾ ಮಾನ್ಯತತಾ ಕಾರ್ಡ್‌ಗಳನ್ನು ನೀಡಿದ್ದು, ಅವುಗಳನ್ನು ಡೌನ್‌ಲೋಡ್ ಮಾಡಬೇಕಿತ್ತು. ಆದರೆ ಡೌನ್‌ಲೋಡ್ ಮಾಡಲು ಸಾಧ್ಯವಾಗಿಲ್ಲ. ಈ ಕಾರಣದಿಂದ ಚೀನಾ ಪ್ರವೇಶ ನಿರಾಕರಿಸಿದೆ. ಇನ್ನು ಡೌನ್‌ಲೋಡ್ ಮಾಡಲು ಯಶಸ್ವಿಯಾದ ಒಬ್ಬ ಅಥ್ಲೀಟ್‌ಗೂ ಹಾಂಗ್‌ಕಾಂಗ್ ಆಚೆ ಪ್ರಯಾಣಿಸಲು ಅನುಮತಿ ನೀಡಿಲ್ಲ.

ಈ ಬಗ್ಗೆ ಭಾರತ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!