ʼಫೆಸಿಫಿಕ್‌ ದೇಶಗಳಿಗೆʼ ಚೀನಾ ಹೆಣೆದ ಬಲೆ ವಿಫಲ: ಭದ್ರತಾ ಒಪ್ಪಂದ ನಿರಾಕರಿಸಿದ 10 ರಾಷ್ಟ್ರಗಳು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಪೆಸಿಫಿಕ್ ದ್ವೀಪ ಪ್ರದೇಶದಲ್ಲಿರುವ ರಾಷ್ಟ್ರಗಳಿಗೆ ಸಹಾಯ ಹಸ್ತಚಾಚುವ ನೆಪದಲ್ಲಿ ಅಲ್ಲಿನ ಆರ್ಥಿಕತೆ, ಭದ್ರತಾ ವ್ಯವಸ್ಥೆ ಹಾಗೂ ರಾಜಕೀಯ ಕ್ಷೇತ್ರಗಳನ್ನು ಹತೋಟಿಗೆ ಪಡೆವ ಉದ್ದೇಶ ಹೊತ್ತು ಒಪ್ಪಂದ ಪ್ರಸ್ತಾಪಿಸಿದ್ದ ಚೀನಾಕ್ಕೆ ಭಾರಿ ನಿರಾಸೆಯಾಗಿದೆ. ಡ್ರಾಗನ್‌ ರಾಷ್ಟ್ರದ ಹವಣಿಕೆ  ಅರ್ಥೈಸಿಕೊಂಡ 10 ಫೆಸಿಫಿಕ್‌ ರಾಷ್ಟ್ರಗಳು ಒಪ್ಪಂದ ನಿರಾಕರಿಸಿ ʼಚೀನಾ ಬಲೆಯಲ್ಲಿʼ ತಾವು ಸಿಲುಕುವುದಿಲ್ಲ ಎಂಬ ಸ್ಪಷ್ಟ ಸಂದೇಶ ರವಾನಿಸಿವೆ.
ಫೆಸಿಫಿಕ್‌ ರಾಷ್ಟ್ರಗಳೊಂದಿಗೆ ಭದ್ರತಾ ಒಪ್ಪಂದ ಮಾಡಿಕೊಳ್ಳುವ ಸಲುವಾಗಿ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರು ದ್ವೀಪರಾಷ್ಟ್ರಗಳ ನಾಯಕರೊಂದಿಗೆ ವರ್ಚುವಲ್‌ ಸಭೆ ನಡೆಸಿದ್ದರು. ದಕ್ಷಿಣ ಫೆಸಿಫಿಕ್‌ ಪ್ರದೇಶದಲ್ಲಿ ಚೀನಾ ಪಾಲ್ಗೊಳ್ಳುವಿಯನ್ನು  ದೊಡ್ಡಮಟ್ಟದಲ್ಲಿ ಹೆಚ್ಚಿಸಿಕೊಳ್ಳುವುದು ಇದರ ಹಿಂದಿನ ಪ್ರಮುಖ ಉದ್ದೇಶವಾಗಿತ್ತು. ಈ ಸಂಬಂಧ ಚೀನಾ ಐದು ವರ್ಷಗಳ ಕ್ರಿಯಾಯೋಜನೆಯನ್ನು ಆ ರಾಷ್ಟ್ರಗಳ ಮುಂದಿಟ್ಟಿತ್ತು. ಫೆಸಿಫಿಕ್ ‌ ಪ್ರದೇಶದ ಸ್ಥಳೀಯ ಪೊಲೀಸರಿಗೆ ತರಬೇತಿ ನೀಡುವುದು, ಸೈಬರ್ ಭದ್ರತೆ ಒದಗಿಸುವುದು, ರಾಜಕೀಯ ಮೈತ್ರಿ ವಿಸ್ತರಣೆ, ಸೂಕ್ಷ್ಮ ಸಮುದ್ರ ಮ್ಯಾಪಿಂಗ್ ನಡೆಸುವ ಮೂಲಕ ಆ ರಾಷ್ಟ್ರಗಳಿಗೆ ಸಹಾಯ ಮಾಡುವುದಾಗಿ, ಅದಕ್ಕೆ ಪ್ರತಿಯಾಗಿ ಅಲ್ಲಿನ ಭೂಮಿ, ಜಲಪ್ರದೇಶ, ನೈಸರ್ಗಿಕ ಸಂಪನ್ಮೂಲಗಳನ್ನು ತಾನು ಬಳಸಿಕೊಳ್ಳಲು ಅವಕಾಶ ನೀಡುವಂತೆ ಚೀನಾ ಪ್ರಸ್ತಾಪಿಸಿತ್ತು. ಅದರೊಂದಿಗೆ ಫೆಸಿಫಿಕ್‌ ರಾಷ್ಟ್ರಗಳಿಗೆ ಕೋಟ್ಯಾಂತರ ಡಾಲರ್ ನೆರವು- ಸಾಲ ಸೌಲಭ್ಯ, ಮುಕ್ತ ವ್ಯಾಪಾರ ಒಪ್ಪಂದ ಹಾಗೂ ಚೀನಾ ಹಿಡಿತದಲ್ಲಿರುವ ವಿಶ್ವ ಮಾರುಕಟ್ಟೆಯಲ್ಲಿ ಫೆಸಿಫಿಕ್‌ ರಾಷ್ಟ್ರಗಳ ವಸ್ತುಗಳಿಗೆ ಬೇಡಿಕೆ ಸೃಷ್ಟಿಸಿಕೊಡುವ ಪ್ರಲೋಭನೆಗಳನ್ನು ಒಡ್ಡಿತ್ತು.
ಆದರೆ ಚೀನಾ ಒಡ್ಡಿದ ಆಮಿಷಗಳ ಹಿಂದಿನ ಹುನ್ನಾರಗಳನ್ನು ಸ್ಪಷ್ಟವಾಗಿ ಅರ್ಥೈಕೊಂಡ ಫೆಸಿಫಿಕ್‌ ರಾಷ್ಟ್ರಗಳು ” ಈ ಒಪ್ಪಂದ ನಮ್ಮ ಪ್ರಾದೇಶಿಕ ಸ್ಥಿರತೆಗೆ ಬೆದರಿಕೆಯಾಗಿದೆ” ಎಂದು ಅಭಿಪ್ರಾಯಪಟ್ಟು ಒಪ್ಪಂದವನ್ನು ಸ್ಪಷ್ಟವಾಗಿ ನಿರಾಕರಿಸಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!