Monday, March 27, 2023

Latest Posts

ಮೂರನೇ ಅವಧಿಗೆ ಚೀನಾದ ಅಧ್ಯಕ್ಷ ಗದ್ದುಗೆಗೆ ಏರಿದ ಜಿ ಜಿನ್‌ಪಿಂಗ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೂರನೇ ಅವಧಿಗೆ ಚೀನಾದ ಅಧ್ಯಕ್ಷರಾಗಿ (President of China) ಜಿ ಜಿನ್‌ಪಿಂಗ್ (Xi Jinping) ಅವರು ಶುಕ್ರವಾರ ಅಧಿಕಾರ ಸ್ವೀಕರಿಸಿದ್ದಾರೆ.
ಕಳೆದ ಅಕ್ಟೋಬರ್ ತಿಂಗಳಲ್ಲಿ ಚೀನಾ ಕಮ್ಯುನಿಸ್ಟ್ ಪಾರ್ಟಿಯ ಮುಖ್ಯಸ್ಥರಾಗಿ ಮತ್ತೆ ಐದು ವರ್ಷಕ್ಕೆ ಆಯ್ಕೆ ಮಾಡಲಾಗಿತ್ತು.

ಒಂದೆಡೆ ಕೋವಿಡ್ ಪಾಲಿಸಿಗಾಗಿ ಚೀನಾದಲ್ಲಿ ಜಿನ್‌ಪಿಂಗ್ ಅವರ ವಿರುದ್ಧ ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು.ಆದ್ರೆ ಇದನ್ನು ನಾಜೂಕಾಗಿ ಗೌಣ ಮಾಡಿರುವ ನ್ಯಾಶನಲ್ ಪೀಪಲ್ಸ್ ಕಾಂಗ್ರೆಸ್, ಕ್ಸಿ ಮಿತ್ರ ಲಿ ಕ್ವಿಯಾಂಗ್ ಅವರನ್ನು ಹೊಸ ಪ್ರಧಾನ ಮಂತ್ರಿಯಾಗಿ ನೇಮಿಸಲಾಗುತ್ತಿದೆ.

ಶುಕ್ರವಾರ ಪ್ರತಿನಿಧಿಗಳು ಕ್ಸಿ ಜಿನ್‌ಪಿಂಗ್ ಅವರನ್ನು ಚೀನಾದ ಅಧ್ಯಕ್ಷರಾಗಿ ಮೂರನೇ ಅವಧಿಗೆ ಆಯ್ಕೆ ಮಾಡಿದರು. ಸರ್ವಾನುಮತದ ಮೂಲಕ ಅವರನ್ನು ದೇಶದ ಕೇಂದ್ರ ಮಿಲಿಟರಿ ಆಯೋಗದ ಮುಖ್ಯಸ್ಥರನ್ನಾಗಿಯೂ ನೇಮಕ ಮಾಡಲಾಯಿತು.

ವೇದಿಕೆಯ ಅಂಚಿನಲ್ಲಿ ಪ್ರದರ್ಶಿಸಲಾಗಿದ್ದ ಡಿಜಿಟಲ್ ಮಾನಿಟರ್‌ನಲ್ಲಿ ಅಂತಿಮ ಟ್ಯಾಲಿ 2,952 ಮತಗಳು ಕ್ಸಿ ಜಿನ್‌ಪಿಂಗ್ ಪರವಾಗಿ ಕಾಣಿಸಿಕೊಂಡಿತು. ಆ ಮೂಲಕ ಮೂರನೇ ಅವಧಿಗೆ ಅವರು ಚೀನಾದ ಅಧ್ಯಕ್ಷರಾದರು.

ಜಿನ್‌ಪಿಂಗ್ ಅವರು ಅಧಿಕಾರ ಸ್ವೀಕಾರ ಸಮಾರಂಭವನ್ನು ದೂರದರ್ಶನದ ಮೂಲಕ ದೇಶಾದ್ಯಂತ ಪ್ರಸಾರ ಮಾಡಲಾಯಿತು. ಸಮೃದ್ಧ, ಶಕ್ತಿಶಾಲಿ, ಪ್ರಜಾಸತ್ತಾತ್ಮಕ, ನಾಗರಿಕ, ಸೌಹಾರ್ದ ಮತ್ತು ಶ್ರೇಷ್ಠ ಆಧುನಿಕ ಸಮಾಜವಾದಿ ರಾಷ್ಟ್ರವನ್ನಾಗಿ ರೂಪಿಸುವ ಭರವಸೆಯನ್ನು ಚೀನಾ ಜನರಿಗೆ ಅವರು ನೀಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!