ಚೀನಾದ ವಿದೇಶಾಂಗ ಸಚಿವ ಕ್ವಿನ್ ಗಾಂಗ್ ನಾಪತ್ತೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚೀನಾದ ವಿದೇಶಾಂಗ ಸಚಿವ ಕ್ವಿನ್ ಗಾಂಗ್ ಕಳೆದ ಮೂರು ವಾರದಿಂದ ಎಲ್ಲಿಯೂ ಕಾಣಿಸಿಕೊಂಡಿಲ್ಲ, ಈ ಹಿನ್ನೆಲೆಯಲ್ಲಿ ಅವರು ನಾಪತ್ತೆಯಾಗಿದ್ದಾರಾ ಎನ್ನುವ ಸುದ್ದಿಗಳು ಎಲ್ಲೆಡೆ ಹರಿದಾಡುತ್ತಿವೆ.

ಮೂರು ವಾರದಿಂದ ಯಾವ ಸಭೆ ಸಮಾರಂಭದಲ್ಲಿಯೂ ಕ್ವಿನ್ ಕಾಣಿಸಿಕೊಂಡಿಲ್ಲ, ಅವರ ಸ್ಥಾನವನ್ನು ದೇಶದ ಉನ್ನತ ರಾಜತಾಂತ್ರಿಕ ಹಾಗೂ ಮುಖ್ಯಸ್ಥರಾಗಿರುವ ವಾಂಗ್ ಯೀ ಅವರು ತೆಗೆದುಕೊಂಡಿದ್ದಾರೆ.

ಕ್ವಿನ್ ನಾಪತ್ತೆಗೆ ಆರೋಗ್ಯ ಸ್ಥಿತಿಯೇ ಕಾರಣ ಎನ್ನುವ ಮಾತುಗಳು ಕೇಳಿಬಂದಿವೆ, ಆದರೆ ಯಾವುದೇ ಆಸ್ಪತ್ರೆಯ ಫೋಟೊಗಳು ಹೊರಬಿದ್ದಿಲ್ಲ. ಕಳೆದ ವಾರ ಜಕಾರ್ತದಲ್ಲಿ ಆಗ್ನೇಯ ಏಷ್ಯಾ ರಾಷ್ಟ್ರಗಳ ಒಕ್ಕೂಟ ಶೃಂಗಸಭೆಯಲ್ಲಿ ಕ್ವಿನ್ ಕಾಣಿಸಿಲ್ಲ. ಇನ್ನು ಜೂ.25ರಂದು ಒಮ್ಮೆ ಕ್ವಿನ್ ಸಾರ್ವಜನಿಕವಾಗಿ ಕಾಣಿಸಿದ್ದರು. ಅದಾದ ನಂತರ ಅವರು ಎಲ್ಲಿಯೂ ಕಾಣಿಸಿಕೊಂಡಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!