May 16, 2026
Saturday, May 16, 2026
spot_img

ಕಸದ ಬುಟ್ಟಿ ಸೇರಿದ ಚೀನಾದ ಗಿಫ್ಟ್‌ಗಳು! ಟ್ರಂಪ್ ತಂಡದ ‘ಸೀಕ್ರೆಟ್ ಮೂವ್’ಗೆ ಜಗತ್ತೇ ಶಾಕ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಚೀನಾ ಪ್ರವಾಸ ಹೊಸ ರಾಜತಾಂತ್ರಿಕ ಚರ್ಚೆಗೆ ಕಾರಣವಾಗಿದೆ.

ಚೀನಾ ಅಧ್ಯಕ್ಷ ಕ್ಸೀ ಜಿನ್‌ಪಿಂಗ್ ಜೊತೆ ಸ್ನೇಹಪೂರ್ವಕವಾಗಿ ಕಾಣಿಸಿಕೊಂಡಿದ್ದ ಟ್ರಂಪ್ ತಂಡ, ವಾಪಸ್ ತೆರಳುವಾಗ ತೆಗೆದುಕೊಂಡ ಮುನ್ನೆಚ್ಚರಿಕೆ ಕ್ರಮಗಳು ಇದೀಗ ಅಚ್ಚರಿ ಮೂಡಿಸಿವೆ.

ಚೀನಾ ಸರ್ಕಾರ ನೀಡಿದ್ದ ಬ್ಯಾಡ್ಜ್‌, ಲ್ಯಾಪಲ್ ಪಿನ್‌, ಬರ್ನರ್ ಫೋನ್‌ಗಳು ಸೇರಿದಂತೆ ಹಲವು ಉಡುಗೊರೆಗಳನ್ನು ಟ್ರಂಪ್ ತಂಡ ವಿಮಾನ ಏರುವ ಮೊದಲು ಕಸದ ಬುಟ್ಟಿಗೆ ಎಸೆದಿರುವುದು ಬೆಳಕಿಗೆ ಬಂದಿದೆ. ಚೀನಾದಿಂದ ಬಂದ ಯಾವುದೇ ವಸ್ತುವಿಗೂ ಅಮೆರಿಕದ ವಿಮಾನಕ್ಕೆ ಪ್ರವೇಶ ಇಲ್ಲ ಎಂದು ಶ್ವೇತಭವನದ ಪ್ರತಿನಿಧಿ ಎಮಿಲಿ ಗುಡಿನ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ:

ಚೀನಾಗೆ ತೆರಳುವ ಮುನ್ನವೇ ಟ್ರಂಪ್ ತಂಡ ತಮ್ಮ ವೈಯಕ್ತಿಕ ಮೊಬೈಲ್ ಮತ್ತು ಎಲೆಕ್ಟ್ರಾನಿಕ್ ಸಾಧನಗಳನ್ನು ಅಮೆರಿಕದಲ್ಲೇ ಬಿಟ್ಟು ಬಂದಿತ್ತು ಎನ್ನಲಾಗಿದೆ. ಪ್ರವಾಸದ ಅವಧಿಯಲ್ಲಿ ಬಳಸಿ ಎಸೆಯಬಹುದಾದ ‘ಬರ್ನರ್ ಫೋನ್’ಗಳನ್ನು ಮಾತ್ರ ಉಪಯೋಗಿಸಲಾಗಿತ್ತು.

ಈ ಬೆಳವಣಿಗೆ ಅಮೆರಿಕ-ಚೀನಾ ನಡುವಿನ ವಿಶ್ವಾಸದ ಕೊರತೆಯನ್ನು ಮತ್ತೆ ಬಹಿರಂಗಪಡಿಸಿದೆ ಎನ್ನಲಾಗುತ್ತಿದೆ. ತೈವಾನ್ ವಿಚಾರ, ತಂತ್ರಜ್ಞಾನ ಪೈಪೋಟಿ ಮತ್ತು ಭದ್ರತಾ ಆತಂಕಗಳ ನಡುವೆಯೇ ಎರಡು ರಾಷ್ಟ್ರಗಳ ಸಂಬಂಧಗಳಲ್ಲಿ ಇನ್ನೂ ಗಂಭೀರ ಭಿನ್ನಾಭಿಪ್ರಾಯಗಳು ಮುಂದುವರಿದಿವೆ ಎಂಬ ವಿಶ್ಲೇಷಣೆ ಕೇಳಿಬರುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !