SHOCKING VIDEO| ಸವಾಲೆಸೆದು ಏಕಾಏಕಿ ನಾಲ್ಕು ಬಾಟಲಿ ಮದ್ಯ ಕುಡಿದವನ ಗತಿ ಏನಾಯ್ತು ನೋಡಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸೋಶಿಯಲ್ ಮೀಡಿಯಾ ಪುಣ್ಯ ಎನ್ನುವಂತೆ ಅನೇಕ ವಿಡಿಯೋಗಳು ವೈರಲ್‌ ಆಗುತ್ತಿವೆ. ಇತ್ತೀಚೆಗಷ್ಟೇ ಚೀನಾದ ಯುವಕನೊಬ್ಬ ಲೈವ್ ಸ್ಟ್ರೀಮ್ ಸ್ಪರ್ಧೆಯ ಹೆಸರಿನಲ್ಲಿ ನಡೆಸಿದ ಪ್ರಯೋಗ ವಿಕೋಪಕ್ಕೆ ಹೋಗಿ ತನ್ನ ಪ್ರಾಣವನ್ನು ತೆಗೆದುಕೊಂಡನು.

ಚೀನಾದಲ್ಲಿ ಸ್ಕ್ಯಾನಿಯಾಂಗ್ (34) ಎಂಬ ವ್ಯಕ್ತಿ ಚಾಲೆಂಜ್‌ನ ಭಾಗವಾಗಿ ಟಿಕ್ ಟಾಕ್ ಲೈವ್‌ನಲ್ಲಿ 4 ಫುಲ್ ಬಾಟಲಿ ಮದ್ಯ ಸೇವಿಸಿ ತೀವ್ರ ಅನಾರೋಗ್ಯಕ್ಕೆ ಒಳಗಾಗಿ ಕೇವಲ 12 ಗಂಟೆಗಳಲ್ಲಿ ಸಾವನ್ನಪ್ಪಿದ್ದಾನೆ. ಸ್ಕ್ಯಾನಿಯಾಂಗ್ ಸಾಮಾಜಿಕ ಮಾಧ್ಯಮದ ಪ್ರಭಾವಿ ಎಂದು ಪೊಲೀಸರು ತಿಳಿಸಿದ್ದಾರೆ. ಆತ ಸೇವಿಸಿದ ಮದ್ಯದಲ್ಲಿ ಶೇಕಡಾ 30 ರಿಂದ 60 ರಷ್ಟು ಆಲ್ಕೋಹಾಲ್ ಅಂಶವಿತ್ತು. ಈ ಹಿಂದೆ ಈ ರೀತಿ ಲೈವ್‌ನಲ್ಲಿ ಮದ್ಯ ಸೇವಿಸಿದ್ದಕ್ಕಾಗಿ ಆತನ ಖಾತೆಯನ್ನು ಬ್ಯಾನ್ ಮಾಡಲಾಗಿತ್ತು. ಮತ್ತೆ ಬೇರೆ ಹೆಸರಿನಲ್ಲಿ ಖಾತೆ ತೆರೆದರು.

ಆತ ಸೇವಿಸಿದ ಮದ್ಯವನ್ನು ಬೈಜು ಎಂದು ಕರೆಯಲಾಗುತ್ತದೆ. ಇದು ಚೈನೀಸ್ ರೀತಿಯ ಸ್ಪಿರಿಟ್ ಆಗಿದೆ. ತುಂಬಾ ಸ್ಟ್ರಾಣಗ್ ಇದು 30 ರಿಂದ 60 ರಷ್ಟು ಆಲ್ಕೋಹಾಲ್ ಅಂಶವನ್ನು ಹೊಂದಿದೆ.

https://twitter.com/i/status/1662473094953418752

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!