CINEMA| ಆದಿಪುರುಷ ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿ ಯಾರು ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪ್ರಭಾಸ್ ರಾಮನಾಗಿ, ಕೃತಿ ಸನೋನ್ ಸೀತೆಯಾಗಿ, ಸೈಫ್ ಅಲಿಖಾನ್ ರಾವಣಾಸುರನಾಗಿ, ಓಂ ರಾವುತ್ ನಿರ್ದೇಶಿಸುತ್ತಿರುವ ಅದಿಪುರುಷ ಚಿತ್ರವು ಜೂನ್ 16 ರಂದು ದೇಶಾದ್ಯಂತ ಬಿಡುಗಡೆಯಾಗುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಈ ಚಿತ್ರದ ಟ್ರೇಲರ್ ಹಾಗೂ ಹಾಡುಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಭಾರೀ ನಿರೀಕ್ಷೆ ಮೂಡಿಸಿದೆ. ಜೂನ್ 6 ರಂದು ತಿರುಪತಿ ಶ್ರೀ ವೆಂಕಟೇಶ್ವರ ವಿಶ್ವವಿದ್ಯಾನಿಲಯದಲ್ಲಿ ಈ ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಆದಿಪುರುಷ ಚಿತ್ರದ ಪ್ರೀ ರಿಲೀಸ್ ಸಮಾರಂಭಕ್ಕೆ ಯಾರು ಅತಿಥಿಯಾಗುತ್ತಾರೆ ಎಂದು ಎಲ್ಲರೂ ಕಾಯುತ್ತಿದ್ದರು. ಇತ್ತೀಚೆಗೆ ಚಿತ್ರಘಟಕ ಆದಿಪುರುಷ ಕಾರ್ಯಕ್ರಮದ ಅತಿಥಿಯನ್ನು ಘೋಷಿಸಿದೆ. ಖ್ಯಾತ ಆಧ್ಯಾತ್ಮಿಕ ಮತ್ತು ವೈದಿಕ ಗುರು ಶ್ರೀ ಚಿನಜೀಯರ್ ಸ್ವಾಮೀಜಿ ಆದಿಪುರುಷ ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಬರಲಿದ್ದಾರೆ.

ಸಿನಿ ಗಣ್ಯರು ಈ ಸಿನಿಮಾದಲ್ಲಿ ಅತಿಥಿಯಾಗಿ ಬರಬೇಕೆಂದು ಅಭಿಮಾನಿಗಳು ಬಯಸಿದ್ದರು. ಆದರೆ ಚಿತ್ರವು ಆಧ್ಯಾತ್ಮಿಕವಾಗಿ ಪ್ರಚಾರ ಮಾಡುತ್ತಿರುವುದರಿಂದ, ಶ್ರೀ ಚಿನಜಿಯರ್ ಸ್ವಾಮಿಯನ್ನು ಕರೆಯುವುದು ಸರಿ ಎಂಬ ನಂಬಿಕೆಯಿಂದ ಅವರನ್ನು ಆಹ್ವಾನಿಸಲಾಗಿದೆ. ತಿರುಪತಿಯಲ್ಲಿ ಆದಿಪುರುಷ ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ಈಗಾಗಲೇ ಸಿದ್ಧತೆಗಳು ಭರದಿಂದ ಸಾಗಿವೆ. ಈ ಕಾರ್ಯಕ್ರಮಕ್ಕೆ ಚಿನಜಿಯರ್ ಶ್ರೀ ಸ್ವಾಮಿ ಬರುತ್ತಿರುವ ಸುದ್ದಿ ಕೇಳಿ ಅಭಿಮಾನಿಗಳಲ್ಲಿ ಆಸಕ್ತಿ ಜಾಸ್ತಿಯಾಗಿದೆ. ಈ ಚಿತ್ರವನ್ನು ತೆಲುಗಿನಲ್ಲಿ ಜನಪ್ರಿಯ ನಿರ್ಮಾಣ ಸಂಸ್ಥೆ ಪೀಪಲ್ ಮೀಡಿಯಾ ಫ್ಯಾಕ್ಟರಿ ಬಿಡುಗಡೆ ಮಾಡಲಿದೆ. ಸುಮಾರು 150 ಕೋಟಿ ರುಪಾಯಿಗೆ ತೆಲುಗಿನ ಹಕ್ಕುಗಳನ್ನು ಪಡೆದಿದ್ದಾರೆ ಎಂದು ವರದಿಯಾಗಿದೆ.

Image

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!