ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಹುಟ್ಟುಹಬ್ಬ (ಏಪ್ರಿಲ್ 8). ಬನ್ನಿ ಅಭಿಮಾನಿಗಳು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅಲ್ಲು ಅರ್ಜುನ್ ಅಭಿನಯದ ಪುಷ್ಪ 2 ಟೀಸರ್ ಅನ್ನು ನಿರ್ಮಾಪಕರು ಬಿಡುಗಡೆ ಮಾಡಿ ಅಭಿಮಾನಿಗಳಿಗೆ ಉಡುಗೊರೆ ನೀಡಿದ್ದಾರೆ. ಮೂರು ನಿಮಿಷದ ವಿಡಿಯೋ ಚಿತ್ರ ಹೇಗಿರಲಿದೆ ಎಂಬುದನ್ನು ಬಹಿರಂಗಪಡಿಸಿದೆ. ಮತ್ತು ಈ ಟೀಸರ್ ಜೊತೆಗೆ ಬಿಡುಗಡೆಯಾಗಿರುವ ಪೋಸ್ಟರ್ ನಲ್ಲಿ ಅಲ್ಲು ಅರ್ಜುನ್ ಕಾಳಿ ಮಾತೆಯ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ಅಲ್ಲು ಅರ್ಜುನ್ ಸೀರೆ ಉಟ್ಟು, ಕನ್ನಡಕ ಹಾಕಿಕೊಂಡು ಕೈಯಲ್ಲಿ ಚಿನ್ನ ತುಂಬಿದ ಗನ್ ಹಿಡಿದು ಸೆಲೆಬ್ರೆಟಿಯರನ್ನೂ ಹುಚ್ಚೆಬ್ಬಿಸುತ್ತಿದ್ದಾರೆ. ಚಿತ್ರಕ್ಕಾಗಿ ಅವರ ಸಮರ್ಪಣೆಗೆ ಹ್ಯಾಟ್ಸ್ ಆಫ್ ಎಂದು ಅವರು ಟ್ವೀಟ್ ಮಾಡಿದ್ದಾರೆ. ಈ ಹಿನ್ನಲೆಯಲ್ಲಿ ಚಿರಂಜೀವಿ ಕೂಡ ಟ್ವೀಟ್ ಮಾಡಿ ಶುಭ ಹಾರೈಸಿದ್ದಾರೆ. ಹುಟ್ಟುಹಬ್ಬದ ಶುಭಾಶಯಗಳು ಬನ್ನಿ. ನೀವು ಈ ರೀತಿಯ ಜನ್ಮದಿನಗಳನ್ನು ಹೆಚ್ಚು ಆಚರಿಸಿಕೊಳ್ಳಬೇಕು. ಮತ್ತು ಪುಷ್ಪ ನಿಮ್ಮ ಫಸ್ಟ್ ಲುಕ್ ರಾಕ್ಸ್ ಎಂದು ಟ್ವೀಟ್ ಮಾಡಿದ್ದಾರೆ.
ಅಲ್ಲದೇ ಸಾಯಿ ಧರಮ್ ತೇಜ್, ನಿಖಿಲ್, ರಶ್ಮಿಕಾ ಮಂದಣ್ಣ, ಮೃಣಾಲ್ ಠಾಕೂರ್, ಹರೀಶ್ ಶಂಕರ್, ಎಸ್ ಎಸ್ ಥಮನ್, ಸುರೇಂದ್ರ ರೆಡ್ಡಿ, ಗೋಪಿಚಂದ್ ಮಲಿನೇನಿ ಸೇರಿದಂತೆ ಹಲವರು ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.
Happy Birthday Dear Bunny @alluarjun !
Many Happy Returns!! 💐💐Also The First Look of #Pushpa2TheRule Rocks!
All The Very Best!!— Chiranjeevi Konidela (@KChiruTweets) April 8, 2023