ಎನ್‌ಎಸ್‌ಇ ಮಾಜಿ ಎಂಡಿ, ಸಿಇಒ ಚಿತ್ರಾ ರಾಮಕೃಷ್ಣ ಮನೆ ಮೇಲೆ ಐಟಿ ದಾಳಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಎನ್‌ಎಸ್‌ಇ ಮಾಜಿ ಎಂಡಿ ಮತ್ತು ಸಿಇಒ ಚಿತ್ರಾ ರಾಮಕೃಷ್ಣ ಮತ್ತು ಅವರಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ತೆರಿಗೆ ವಂಚನೆ ತನಿಖೆಯ ಭಾಗವಾಗಿ ಮುಂಬೈ ಮತ್ತು ಚೆನ್ನೈನಲ್ಲಿ ಅವರಿಗೆ ಸಂಬಂಧಿಸಿದ ಕಚೇರಿ, ಮನೆಗಳ ಶೋಧ ನಡೆಸಲಾಗುತ್ತಿದೆ.
ಚಿತ್ರಾ ರಾಮಕೃಷ್ಣ ಅವರು ಏಪ್ರಿಲ್ 2013 ರಿಂದ ಡಿಸೆಂಬರ್ 2016 ರವರೆಗೆ ಎನ್​ಎಸ್​ಇ ಯ ವ್ಯವಸ್ಥಾಪಕ ನಿರ್ದೇಶಕಿ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (MD & CEO) ಆಗಿದ್ದರು.
ಇತ್ತೀಚೆಗೆ ಚಿತ್ರಾ ರಾಮಕೃಷ್ಣ ಅವರು ಸುದ್ದಿಯಲ್ಲಿದ್ದು,ಅಧ್ಯಾತ್ಮಿಕ ಗುರುಗಳೊಂದಿಗೆ ಗೌಪ್ಯ ಮಾಹಿತಿಯನ್ನು ಹಂಚಿಕೊಂಡ ಆರೋಪವನ್ನು ಹೊತ್ತಿಕೊಂಡಿದ್ದರು.
‘ಆಧ್ಯಾತ್ಮಿಕ ಗುರು’ ಅವರ ಹೇರ್‌ಸ್ಟೈಲ್‌ನಲ್ಲಿ ಆಸಕ್ತಿ ವಹಿಸಿ, ಅವರೊಂದಿಗೆ ಹಾಡುಗಳನ್ನು ಸಹ ಹಂಚಿಕೊಂಡಿದ್ದರಂತೆ. ಸೆಬಿ(SEBI) ಮಾಹಿತಿ ಪ್ರಕಾರ ಸಮಯ ಕಳೆಯಲು ಸೆಶೆಲ್ಸ್‌ಗೆ ವಿಹಾರಕ್ಕೆ ತೆರಳಿದ್ದರು ಎಂದು ತಿಳಿದು ಬಂದಿದೆ.
ಚಿತ್ರಾ ರಾಮಕೃಷ್ಣ ಅವರು ತಮ್ಮ ಗುರುಗಳ ಬಗ್ಗೆ ಮಾತನಾಡಿದ್ದು, ಮಾರುಕಟ್ಟೆ ನಿಯಂತ್ರಕ ಸೆಬಿಗೆ ನೀಡಿದ ರಾಮಕೃಷ್ಣ ಅವರ ಹೇಳಿಕೆಗೆ ಇದು ವಿರೋಧಾಭಾಸವಾಗಿದೆ.
ಗುರುಗಳು ಹಿಮಾಲಯ ಪರ್ವತ ಶ್ರೇಣಿಗಳಲ್ಲಿ ವಾಸಿಸುತ್ತಿದ್ದಾರೆಂದು ಹೇಳಿರುವ ಅವರು, 20 ವರ್ಷಗಳ ಕಾಲ ವೈಯಕ್ತಿಕ ಮತ್ತು ವೃತ್ತಿಪರ ವಿಷಯಗಳಲ್ಲಿ ಆಕೆಗೆ ಮಾರ್ಗದರ್ಶನ ನೀಡಿದ್ದಾರಂತೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!