ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೊರಿಯೋಗ್ರಾಫರ್ ಒಬ್ಬರು ಬೆಂಗಳೂರಿನಲ್ಲಿ ಒಂದಲ್ಲಾ ಎರಡಲ್ಲ ನೂರು ಬಾರಿ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ದಾರೆ.
ನೂರನೇ ಬಾರಿ ಟ್ರಾಫಿಕ್ ರೂಲ್ಸ್ ಉಲ್ಲಂಘನೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪೊಲೀಸರು 56,000 ರೂಪಾಯಿ ದಂಡ ವಿಧಿಸಿದ್ದಾರೆ. ಅಷ್ಟೇ ಅಲ್ಲದೆ ಸ್ಕೂಟರ್ ವಶಕ್ಕೆ ಪಡೆದಿದ್ದು, ಎರಡು ತಿಂಗಳಲ್ಲಿ ದಂಡ ಕಟ್ಟದಿದ್ದರೆ ಸ್ಕೂಟರ್ 15,000 ರೂಪಾಯಿಗೆ ಹರಾಜು ಹಾಕುವುದಾಗಿ ಎಚ್ಚರಿಸಿದ್ದಾರೆ.
ಬನ್ನೇರುಘಟ್ಟ ರಸ್ತೆಯ ವೆಗಾಸಿಟಿ ಜಂಕ್ಷನ್ ಬಳಿ ಹಸನ್ ರೆಹಮಾನ್ ಎಂಬಾತ ವಿರುದ್ಧ ದಿಕ್ಕಿನಿಂದ ವೇಗವಾಗಿ ಬಂದು ಸ್ಟಂಟ್ ಮಾಡಿ ಇತರ ಪ್ರಯಾಣಿಕರಿಗೆ ಧಮ್ಕಿ ಹಾಕಿದ್ದು ಕಾರಿನ ಡ್ಯಾಶ್ಕ್ಯಾಮ್ನಲ್ಲಿ ರೆಕಾರ್ಡ್ ಆಗಿದೆ.
ಹೆಲ್ಮೆಟ್ ಇಲ್ಲದೆ ವಾಹನ ಚಲಾವಣೆ ಮಾಡಿದ್ದು, ದೋಷಪೂರಿತ ನಂಬರ್ ಪ್ಲೇಟ್, ಗಾಡಿ ಓಡಿಸುತ್ತಲೇ ಮೊಬೈಲ್ನಲ್ಲಿ ಮಾತನಾಡಿದ್ದು, ನೋ ಪಾರ್ಕಿಂಗ್, ನೋ ಎಂಟ್ರಿ, ಝಿಬ್ರಾ ಕ್ರಾಸಿಂಗ್ನಲ್ಲಿ ಪಾರ್ಕಿಂಗ್ ಹಾಗೂ ಟ್ರಿಪಲ್ ರೈಡಿಂಗ್ ಪ್ರಕರಣಗಳು ಹಸನ್ ವಿರುದ್ಧ ದಾಖಲಾಗಿವೆ.