ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾಳೆ ಕ್ರಿಸ್‌ಮಸ್ ದಿನ, ಕ್ರಿಶ್ಚಿಯನ್ನರು ಇಡೀ ಡಿಸೆಂಬರ್‌ನ್ನು ತುಂಬಾ ಎಂಜಾಯ್ ಮಾಡುತ್ತಾರೆ. ಕೆಲಸ ಕಚೇರಿಗಳಲ್ಲಿ ರಜೆ ನೀಡುವ ಕಾರಣ ಕುಟುಂಬದವರ ಜೊತೆಗೂಡಿ ತಮ್ಮ ಊರುಗಳಿಗೆ ತೆರಳಿ ಎಂಜಾಯ್ ಮಾಡುತ್ತಾರೆ. ನಮ್ಮ ದೇಶದಲ್ಲಿ ಕ್ರಿಸ್‌ಮಸ್ ಒಂದು ದಿನದ ಸುಂದರ ಸಂಭ್ರಮಿಸುವ ಹಬ್ಬ. ಬಟ್ ಕ್ರಿಸ್‌ಮಸ್ ಎನ್ನುವ ಹಳ್ಳಿಯೊಂದಿದೆ. ಅಲ್ಲಿ ವರ್ಷವಿಡೀ ಕ್ರಿಸ್‌ಮಸ್ ಸಂಭ್ರಮ ಇರುತ್ತದಂತೆ. ಈ ಬಗ್ಗೆ ಹೆಚ್ಚು ತಿಳಿಯೋಣ ಬನ್ನಿ..
ಸಾಂತಾಕ್ಲಾಸ್ ವಿಲೇಜ್ ಇರುವುದು ಫಿನ್‌ಲ್ಯಾಂಡ್ ರೊವಾನಿಮಿಯಲ್ಲಿ. ಇದು ವರ್ಷವಿಡೀ ಹಿಮದಿಂದ ಆವೃತವಾಗಿರುವ ಪ್ರದೇಶವಾಗಿದೆ. ಸಾಂತಾಕ್ಲಾಸ್ ವಿಲೇಜ್ ಅನ್ನೋದು ಅಮ್ಯೂಸ್‌ಮೆಂಟ್ ಪಾರ್ಕ್. ಫಿನ್‌ಲ್ಯಾಂಡ್‌ನ ಲಾಪ್‌ಲ್ಯಾಂಡ್ ಪ್ರಾಂತ್ಯದಲ್ಲಿ 1985ರಲ್ಲಿ ಸಾಂತಾಕ್ಲಾಸ್ ವಿಲೇಜ್ ಅನ್ನು ಸ್ಥಾಪಿಸಲಾಯಿತು. ಸಾಂತಾಕ್ಲಾಸ್ ಗ್ರಾಮವು ರೊವಾನಿಮಿಯ ಈಶಾನ್ಯಕ್ಕೆ ಸುಮಾರು 8 ಕಿಮೀ ಮತ್ತು ರೊವಾನಿಮಿ ವಿಮಾನ ನಿಲ್ದಾಣದಿಂದ ಸುಮಾರು 2 ಕಿಮೀ ದೂರದಲ್ಲಿದೆ.
ಈ ತಾಣದಲ್ಲಿ ವರ್ಷವಿಡೀ ಸಾಂತಾಕ್ಲಾಸ್‌ನನ್ನು ನೋಡಬಹುದು. ಮಾತ್ರವಲ್ಲಿ ಇಲ್ಲಿಗೆ ಭೇಟಿ ನೀಡಿದರೆ ಮಕ್ಕಳು ಸಾಂತಾಕ್ಲಾಸ್‌ನಿಂದ ಉಡುಗೊರೆಯನ್ನೂ ಪಡೆಯಬಹುದು. ಪ್ರತಿ ವರ್ಷ ಪ್ರಪಂಚದಾದ್ಯಂತದ ಜನರು ಸಾಂತಾನನ್ನು ಭೇಟಿ ಮಾಡಲು ಇಲ್ಲಿಗೆ ಬರುತ್ತಾರೆ. ಸಾಂತಾಕ್ಲಾಸ್ ಗ್ರಾಮದಲ್ಲಿ ಕ್ರಿಸ್ಮಸ್ ಆಚರಣೆಗಳು ಡಿಸೆಂಬರ್ 23 ರಿಂದ ಪ್ರಾರಂಭವಾಗುತ್ತವೆ. ಈ ದಿನದಿಂದ ಸಾಂತಾಕ್ಲಾಸ್ ಜನರನ್ನು ಭೇಟಿಯಾಗಲು ಹೊರಡುವುದು ಇಲ್ಲಿನ ಆಚರಣೆ.
ರೊವಾನಿಮಿ ಗ್ರಾಮವು ಮರದ ಗುಡಿಸಲುಗಳನ್ನು ಒಳಗೊಂಡಿದೆ. ಇಲ್ಲಿಗೆ ಭೇಟಿ ನೀಡಿದರೆ ಎಲ್ಲಿ ನೋಡಿದರೂ ಅಕ್ಷರಗಳು ಮತ್ತು ಅಂಕಿಗಳನ್ನು ನೋಡಬಹುದು. ವಿಶೇಷವೆಂದರೆ ಇಲ್ಲಿ ಬರುವ ಪತ್ರಗಳನ್ನು ಸಾಂತಾಕ್ಲಾಸ್ ಕೂಡ ಓದಿ ಮಕ್ಕಳಿಗೆ, ದೊಡ್ಡವರಿಗೆ ಸ್ಪಂದಿಸುತ್ತಾರೆ. ಅದಕ್ಕಾಗಿಯೇ ಪ್ರಪಂಚದಾದ್ಯಂತದ ಹಲವರು ಇಲ್ಲಿನ ಸಾಂತಾನಿಗೆ ಪತ್ರಗಳನ್ನು ಕಳುಹಿಸುತ್ತಾರೆ. ಈ ಪತ್ರಗಳನ್ನು ಸಂಗ್ರಹಿಸಲು ತಂಡವೊಂದು ಕೆಲಸ ಮಾಡುತ್ತದೆ. ನಂತರ ಅವರು ಅವುಗಳನ್ನು ಸಾಂಟಾಗೆ ತಲುಪಿಸುವ ಕೆಲಸ ಮಾಡುತ್ತಾರೆ.