Friday, September 22, 2023

Latest Posts

ಚೆನ್ನೈನಲ್ಲಿನ ಅಮೆರಿಕ ರಾಯಭಾರ ಕಚೇರಿ ಕಾನ್ಸಲ್ ಜನರಲ್ ಆಗಿ ಅಧಿಕಾರ ಸ್ವೀಕರಿಸಿದ ಕ್ರಿಸ್ಟೋಫರ್ ಹಾಡ್ಜಸ್

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಯುನೈಟೆಡ್‌ ಸ್ಟೇಟ್ಸ್‌ನ ವಿದೇಶಾಂಗ ಇಲಾಖೆ ಅಧಿಕಾರಿ ಕ್ರಿಸ್ಟೋಫರ್ ಡಬ್ಲ್ಯೂ. ಹಾಡ್ಜಸ್ ಅವರು ಚೆನ್ನೈ ನಲ್ಲಿನ ಅಮೆರಿಕ ರಾಯಭಾರ ಕಚೇರಿ ಮುಖ್ಯಸ್ಥರಾಗಿ ಸೋಮವಾರ ಅಧಿಕಾರ ವಹಿಸಿಕೊಂಡಿದ್ದಾರೆ . ಇದಕ್ಕೂ ಮುನ್ನ ಅವರು, ಕೋಆರ್ಡಿನೇಟರ್ ಫಾರ್ ಆಫ್ಘನ್ ರಿಲೊಕೇಷನ್ ಎಫರ್ಟ್ಸ್ ಕಚೇರಿಯ ಹಿರಿಯ ಸಲಹೆಗಾರರಾಗಿದ್ದರು.
ಇಸ್ರೇಲ್-ಪ್ಯಾಲೆಸ್ಟಿನಿಯನ್ ವ್ಯವಹಾರಗಳ ಉಪ ಸಹಾಯಕ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು.

ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿದ ಹಾಡ್ಜಸ್ , ‘ಅಮೆರಿಕ-ಭಾರತ ಸಹಭಾಗಿತ್ವದ ಮಹತ್ವದ ಹೊತ್ತಿನಲ್ಲಿ ದಕ್ಷಿಣ ಭಾರತದಲ್ಲಿ ಅಮೆರಿಕವನ್ನು ಪ್ರತಿನಿಧಿಸುತ್ತಿರುವ ಗೌರವ ನನ್ನದು. ನಾವು ಸ್ಥಳೀಯ ಮತ್ತು ಪ್ರಾದೇಶಿಕವಾಗಿ ಮಾಡುವ ಕೆಲಸಗಳು ಉಭಯ ದೇಶಗಳ ನಡುವಣ ಸಹಭಾಗಿತ್ವವನ್ನು ವಿಸ್ತಾರಗೊಳಿಸುವಲ್ಲಿ ಕೊಡುಗೆ ನೀಡುತ್ತವೆ ಎಂದು ಹೇಳಿದ್ದಾರೆ.

‘ನಮ್ಮ ವ್ಯಾಪ್ತಿಯಲ್ಲಿ ಬರುವ ಕರ್ನಾಟಕ, ಕೇರಳ, ತಮಿಳುನಾಡು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳಾದ ಅಂಡಮಾನ್‌ ನಿಕೊಬಾರ್‌ ದ್ವೀಪ ಸಮೂಹ, ಲಕ್ಷದ್ವೀಪ, ಪುದುಚೆರಿಗಳಲ್ಲಿ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲು ಎದುರು ನೋಡುತ್ತಿದ್ದೇನೆ ಎಂದು ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!