ದೀರ್ಘಕಾಲದ ಗೆಳತಿ ಜೊತೆ ಹಸೆಮಣೆ ಏರಿದ ಬಾಲಿವುಡ್​ ಕಿರುತೆರೆ ನಟ ಕರಣ್ ಗ್ರೋವರ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಬಾಲಿವುಡ್​ನ ಕಿರುತೆರೆ ನಟ ಕರಣ್ ವಿ ಗ್ರೋವರ್ ತಮ್ಮ ದೀರ್ಘಕಾಲದ ಗೆಳತಿ, ನಟಿ ಪಾಪ್ಪಿ ಜಬ್ಬಲ್ ಅವರನ್ನು ವಿವಾಹವಾಗಿದ್ದಾರೆ.
ಹಿಮಾಚಲ ಪ್ರದೇಶದಲ್ಲಿ ಸಿಖ್ ಸಾಂಪ್ರದಾಯ ಪ್ರಕಾರಹಸೆಮಣೆ ಏರಿದ್ದು,ಫೋಟೋವನ್ನು ಕರಣ್ ತಮ್ಮ ಇನ್ಸ್​ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ನಟರಾದ ರಾಯ್ ಲಕ್ಷ್ಮಿ, ಶಮಾ ಸಿಕಂದರ್ ಅವರ ಪತಿ ಜೇಮ್ಸ್ ಮಿಲಿರಾನ್, ಸೊನ್ನಳ್ಳಿ ಸೇಗಲ್ ಸೇರಿದಂತೆ ಇತರರು ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಹಸೆಮಣೆ ಏರುವುದಕ್ಕೂ ಮುನ್ನ ಕರಣ್ ಗ್ರೋವರ್ ಮತ್ತು ಪಾಪ್ಪಿ ಜಬ್ಬಲ್ ಕಳೆದ ಕೆಲವು ದಿನಗಳಿಂದ ಡೇಟಿಂಗ್​ ಮಾಡುತ್ತಿದ್ದರು. ಅಂತಿಮವಾಗಿ ತಾವು ಮದುವೆಯಾಗಿದ್ದೇವೆ ಎಂದು ಅವರೇ ಶೀರ್ಷಿಕೆ ಬರೆದುಕೊಂಡಿದ್ದಾರೆ.
ಕರಣ್ ಗ್ರೋವರ್ ಅವರು ಸಾರಥಿ, ಯಹಾನ್ ಮೈ ಘರ್ ಘರ್ ಖೇಲಿ, ಬಹು ಹುಮಾರಿ ರಜನಿ ಕಾಂತ್, ಕಹಾನ್ ಹಮ್ ಕಹಾನ್ ತುಮ್ ಮತ್ತು ಉದರಿಯಾನ್ ನಂತಹ ಹಲವಾರು ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಬ್ರೋಕನ್ ಬಟ್ ಬ್ಯೂಟಿಫುಲ್ (2018) ಚಿತ್ರದಲ್ಲಿನ ಪಾತ್ರಕ್ಕಾಗಿ ಪಾಪ್ಪಿ ಜಬ್ಬಲ್ ಹೆಚ್ಚು ಹೆಸರುವಾಸಿಯಾಗಿದ್ದು ಪಂಜಾಬಿ ಚಿತ್ರಗಳಾದ ಮಹಿ ಎನ್ಆರ್ ಮತ್ತು ಉಡಾ ಐದಾದಲ್ಲಿಯೂ ನಟಿಸಿದ್ದಾರೆ. 500ಕ್ಕೂ ಹೆಚ್ಚು ಸಂಚಿಕೆಗಳನ್ನು ಪ್ರಸಾರ ಮಾಡಿದ ಕಾರ್ಯುಕ್ರಮವೊಂದರ ಹೋಸ್ಟ್ ಸಹ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!