ಇನ್ಮುಂದೆ ಬ್ಯಾಂಕ್‌ ಲೋನ್‌ಗಷ್ಟೇ ಅಲ್ಲ, ಮದುವೆಗೂ ಬೇಕು CIBIL ಸ್ಕೋರ್: ಯಾಕೆ ಗೊತ್ತಾ? ಇಲ್ಲಿದೆ ಡೀಟೇಲ್ಸ್…!

ಹೊಸ ದಿಗಂತ ಡಿಜಿಟಲ್ ಡೆಸ್ಕ್: 

ಮದುವೆ ಅಂದಾಗ ಅಲ್ಲಿ ಕುಟುಂಬದ ಹಿನ್ನೆಲೆ ಮತ್ತು ಜಾತಕ ಹೊಂದಾಣಿಕೆಯನ್ನು ಸಹಜವಾಗಿ ನೋಡುತ್ತಾರೆ. ಆದ್ರೆ ಇದೀಗ ಅವುಗಳ ಜೊತೆಗೆ ಹಣಕಾಸಿನ ಸ್ಥಿರತೆಯು (CIBIL Score) ಕೂಡ ನಿರ್ಣಾಯಕ ಅಂಶವಾಗುತ್ತಿದೆ.

ಇದಕ್ಕೆ ಉದಾಹರಣೆ ಎಂಬಂತೆ ವರನ CIBIL ಸ್ಕೋರ್ ಕಡಿಮೆ ಇದೆ ಅನ್ನೋ ಕಾರಣಕ್ಕೆ ಮದುವೆಯೊಂದು ಮುರಿದು ಬಿದ್ದಿರುವ ಅಚ್ಚರಿಯ ಘಟನೆಯೊಂದು ಮಹಾರಾಷ್ಟ್ರದಲ್ಲಿ ನಡೆದಿದೆ.

ಹೌದು, ಮಹಾರಾಷ್ಟ್ರದ ಮುರ್ತಿಜಾಪುರದಲ್ಲಿ ಎರಡು ಕುಟುಂಬಗಳು ತಮ್ಮ ಮಕ್ಕಳಿಗೆ ಮದುವೆ ಪ್ರಸ್ತಾಪದ ಬಗ್ಗೆ ಮಾತುಕತೆ ನಡೆಸಲು ಪ್ರಾರಂಭಿಸಿದ್ದವು. ಮದುವೆಯ ಕುರಿತು ಮೂಲಭೂತ ಆದ್ಯತೆಗಳನ್ನು ಒಪ್ಪಿಕೊಂಡ ನಂತರ ಮದುವೆಯನ್ನು ಅಂತಿಮಗೊಳಿಸಲು ಚರ್ಚೆಗಳು ಮುಂದುವರೆದವು. ಈ ವೇಳೆ ವರನ ಮನೆಯಲ್ಲಿ ನಡೆದ ಸಭೆಯಲ್ಲಿ ವಧುವಿನ ಚಿಕ್ಕಪ್ಪ ವರನ ಸಿಬಿಲ್ ಸ್ಕೋರ್ ಅನ್ನು ಪರಿಶೀಲಿಸಲು ಒತ್ತಾಯಿಸಿದ್ದಾರೆ.

ವರನ ಸಿಬಿಲ್ ಸ್ಕೋರ್ ಅನ್ನು ಚೆಕ್ ಮಾಡಿದಾಗ ಆತನ ಸಿಬಿಲ್ ಸ್ಕೋರ್ ತುಂಬಾ ಕೆಟ್ಟದಾಗಿತ್ತು. ಹೀಗಾಗಿ ಆತ ಹಣಕಾಸಿನ ವಿಷಯದಲ್ಲಿ ಶಿಸ್ತಿನಿಂದ ಇಲ್ಲ ಅನ್ನೋದು ಅವನ ಸಿಬಿಲ್ ಸ್ಕೋರ್ ಮೂಲಕ ಬಹಿರಂಗವಾಯಿತು.

ವರನ CIBIL ಸ್ಕೋರ್ ಮೂಲಕ ಆತನ ಕ್ರೆಡಿಟ್ ಇತಿಹಾಸ ಮತ್ತು ಆರ್ಥಿಕ ಶಿಸ್ತನ್ನು ಸೂಚಿಸಿದ್ದು, ವರನು ವಿವಿಧ ಬ್ಯಾಂಕ್‌ಗಳಿಂದ ಬಹು ಸಾಲಗಳನ್ನು ಪಡೆದಿದ್ದಾನೆ. ಅದನ್ನು ಕಟ್ಟಲಾಗದೆ ಕಳಪೆ ಮಟ್ಟದ CIBIL ಸ್ಕೋರ್ ಅನ್ನು ಹೊಂದಿದ್ದಾನೆ ಎಂದು ಫಲಿತಾಂಶಗಳು ಬಹಿರಂಗಪಡಿಸಿದವು. ಇದರಿಂದ ಅವನ ಆರ್ಥಿಕ ಸ್ಥಿರತೆ ಮತ್ತು ತಮ್ಮ ಮಗಳನ್ನು ಪೋಷಿಸುವ ಸಾಮರ್ಥ್ಯದ ಬಗ್ಗೆ ಕಳವಳಗೊಂಡ ವಧುವಿನ ಕುಟುಂಬವು ಮದುವೆಯನ್ನು ರದ್ದುಗೊಳಿಸಿದ್ದಾರೆ.

ಮದುವೆ ರದ್ದಾದ ನಂತರ ಈ ಘಟನೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದ್ದು, ಅನೇಕ ನೆಟಿಜನ್‌ಗಳು ನಾನಾ ರೀತಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!