ಮಹಿಳಾ ಅಧಿಕಾರಿಗೆ ನಿಂದನೆ ಕೇಸ್: ಮೂವರು ಅರೆಸ್ಟ್, ದೂರಿನಲ್ಲಿ ಶಾಸಕರ ಪುತ್ರನ ಹೆಸರೇ ಇಲ್ಲ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಅಕ್ರಮ ಮರಳು ಮಾಫಿಯಾ ತಡೆಯಲು ಹೋದ ಮಹಿಳಾ ಅಧಿಕಾರಿಗೆ ಭದ್ರಾವತಿ ಕಾಂಗ್ರೆಸ್ ಶಾಸಕ ಬಿ ಕೆ ಸಂಗಮೇಶ್ ಪುತ್ರ ಬಸವೇಶ್ ನಿಂದಿಸಿದ್ದಾರೆ ಎನ್ನಲಾದ ವಿಡಿಯೋ ಒಂದು ವೈರಲ್ ಆಗಿತ್ತು. ಈ ಸಂಬಂಧ ಮಹಿಳಾ ಅಧಿಕಾರಿ ಭದ್ರಾವತಿ ಡಿವೈಎಸ್‌ಪಿಗೆ (DYSP) ಅನಾಮಧೇಯ 6 ರಿಂದ 7 ವ್ಯಕ್ತಿಗಳ ವಿರುದ್ಧ ದೂರು ದಾಖಲಿಸಿದ್ದರು.

ಈ ಸಂಬಂಧ ಇದೀಗ ಮೂವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆದ್ರ ವಿಡಿಯೋದಲ್ಲಿ ಅವಾಚ್ಯ ಶಬ್ಧದಲ್ಲಿ ಶಾಸಕರ ಪುತ್ರ ನಿಂದಿಸಿದ್ದಾರೆ ಎಂದು ಹೇಳಿಲಾಗಿತ್ತು, ಇದಕ್ಕೆ ಸಂಬಂಧಿಸಿದಂತೆ ನೀಡಿರುವ ಎಫ್‌ಐಆರ್‌ನಲ್ಲಿ ಬಸವೇಶ್ ಅವರ ಹೆಸರನ್ನೇ ಕೈಬಿಡಲಾಗಿದೆ ಇದು ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

ಮಹಿಳಾ ಅಧಿಕಾರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಚನ್ನಗಿರಿ ತಾಲ್ಲೂಕಿನ ಮಾವಿನಕಟ್ಟೆ ನಿವಾಸಿಯಾದ ರವಿ (38) ಬಿನ್ ಮಲ್ಲೇಶಪ್ಪ, ಹಾಸನ ಜಿಲ್ಲೆಯ ಅರಕಲಗೋಡಿನ ನಿವಾಸದ ವರಣ್ (34) ಬಿನ್ ರಾಜಶೇಖರ್, ಸುರೇಂದ್ರ ಗೌಡ ಕ್ಯಾಂಪ್ ನ ಅಜಯ್ ಬಿನ್ ತಿಪ್ಪೇಶ್ (28) ಎಂಬುವರನ್ನ ಭದ್ರಾವತಿ ಹಳೇ ನಗರ ಪೊಲೀಸರು ಬಂಧಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಮಹಿಳಾ ಅಧಿಕಾರಿ ನೀಡಿದ ದೂರಿನಲ್ಲಿ 6 ರಿಂದ 7 ಜನರ ವಿರುದ್ಧ ದೂರು ದಾಖಲಿಸಿದ್ದರು. ಮೂವರನ್ನು ವಶಕ್ಕೆ ಪಡೆದಿರುವ ಪೊಲೀಸರು ಉಳಿದವರಿಗಾಗಿ ಪತ್ತೆ ನಡೆಸುತ್ತಿದ್ದಾರೆ. ಮಹಿಳಾ ಅಧಿಕಾರಿಗೆ ಅವಾಚ್ಯ ಶಬ್ದಗಳ ನಿಂದನೆ, ಜೀವ ಬೆದರಿಕೆ ಹಾಕಿರುವ ಪ್ರಕರಣದ ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ.

ಭದ್ರಾವತಿಯ ಹಳೆನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಭಾರತೀಯ ದಂಡ ಸಂಹಿತೆ 119, 132 ,352 ,351 ( 2) ಅಡಿಯಲಿ ಎಫ್ಐಆರ್ ದಾಖಲಾಗಿದೆ. ಐಪಿಸಿ 119 ಅಡಿಯಲ್ಲಿ ಗುಂಪುಗಳು ಉದ್ದೇಶಕ ಪೂರಕವಾಗಿ ದಾಳಿ ಮಾಡುವುದು, ಐಪಿಸಿ ಸೆಕ್ಷನ್ 132 ಕರ್ತವ್ಯಕ್ಕೆ ಅಡ್ಡಿಪಡಿಸುವುದು, ಐಪಿಸಿ ಸೆಕ್ಷನ್ 352 ಅವಾಚ್ಯ ಶಬ್ದಗಳಿಂದ ಬೈಯುವುದು ಹಾಗೂ ಐಪಿಸಿ ಸೆಕ್ಷನ್ 351 (2) ಜೀವ ಬೆದರಿಕೆ ಪ್ರಕರಣದಡಿ ದೂರು ದಾಖಲಾಗಿದೆ.

ಎಫ್‌ಐಆರ್‌ ನಲ್ಲಿ ಶಾಸಕ ಸಂಗಮೇಶ್ ಪುತ್ರನ ಹೆಸರೇ ಇಲ್ಲ
ಶಾಸಕ ಸಂಗಮೇಶ್ ಪುತ್ರ ಬಸವೇಶ್‌ ಅವರದ್ದೇ ಧ್ವನಿ ಎಂದು ವಿಪಕ್ಷ ಬಿಜೆಪಿ ಆರೋಪಿಸಿತ್ತು, ಆದ್ರೆ ಶಾಸಕರ ಪುತ್ರರ ಹೆಸರನ್ನು ಹಾಗೂ ದಾಳಿ ಸಂದರ್ಭದಲ್ಲಿ ಮೊಬೈಲ್ ತಂದುಕೊಟ್ಟ ದಂಧೆಕೋರ ರಮೇಶ್ ಹೆಸರನ್ನು ಕೂಡ ಎಫ್‌ಐಆರ್‌ನಲ್ಲಿ. ಬಂಧಿತರನ್ನು ಭದ್ರಾವತಿಯ ಎರಡನೇ ಹೆಚ್ಚುವರಿ ಜಿಲ್ಲಾ ಪ್ರಥಮ ದರ್ಜೆ ನ್ಯಾಯಾಲಯಕ್ಕೆ ಪೊಲೀಸರು ಸಲ್ಲಿಸಲಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!