ದೀಪಕ್‌ ಪಟದಾರಿ ಹತ್ಯೆ ಕೇಸ್‌ ನಲ್ಲಿ ಇಬ್ಬರನ್ನು ವಶಕ್ಕೆ ಪಡೆದ ಸಿಐಡಿ

ಹೊಸದಿಗಂತ ವರದಿ, ಹುಬ್ಬಳ್ಳಿ:
ರಾಯನಾಳದ ಗ್ರಾಪಂ ಸದಸ್ಯ ದೀಪಕ ಪಟದಾರಿ ಹತ್ಯೆಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಇಬ್ಬರು ಆರೋಪಗಳನ್ನು ಸಿಐಡಿ ಅಧಿಕಾರಿಗಳು ಶುಕ್ರವಾರ ಬಾಗಲಕೋಟಿಯಲ್ಲಿ ವಶಪಡೆದಿದ್ದಾರೆ.
ರುದ್ರಪ್ಪ ಮೇಟಿ ಹಾಗೂ ಯಲ್ಲಪ್ಪ ಮೇಟಿ ಅವರನ್ನು ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ದೀಪಕ್ ಪಟದಾರಿ ಹತ್ಯೆಯಲ್ಲಿ ಮೇಟಿ ಕುಟುಂಬದ ಪಾತ್ರವಿದೆ ಎಂದು ಆರೋಪಿಸಿ ದೀಪಕ್ ಅವರ ಪತ್ನಿ ಪುಷ್ಪಾ ಪಟದಾರಿ ಹಳೇಹುಬ್ಬಳ್ಳಿ ಠಾಣೆ ಎದುರು ಕುಟುಂಬ ಸಮೇತರಾಗಿ ಪ್ರತಿಭಟನೆ ನಡೆಸಿದ್ದರು. ಅಷ್ಟೇ ಅಲ್ಲದೆ ಈ ಪ್ರಕರಣವನ್ನು ಸಿಐಡಿಗೆ ವಹಿಸಬೇಕು ಎಂದು ಮುಖ್ಯಮಂತ್ರಿ ಮತ್ತು ಡಿಐಜಿ ಅವರಿಗೆ ಪತ್ರ ಮೂಲಕ ಮನವಿ ಮಾಡಿದ್ದರು. ರಾಜ್ಯ ಸರ್ಕಾರ ಈ ಪ್ರಕರಣದ ವಿಚಾರಣೆಯನ್ನು ಸಿಐಡಿಗೆ ವಹಿಸಿ ಆದೇಶಿಸಿತ್ತು. ಪುಷ್ಪಾ ಇತ್ತೀಚೆಗಷ್ಟೇ ತಮ್ಮ ನವನಗರ ಸಿಟಿ ಪಾರ್ಕ್ ನ ಮನೆಯಲ್ಲಿ ನೇಣಿಗೆ ಶರಣಾಗಿದ್ದರು. ಈಗ ಸಿಐಡಿ ಅಕಾರಿಗಳು ತನಿಖೆ ಕೈಗೊಂಡಿದ್ದು, ಹತ್ಯೆ ಸಂಬಂಸಿ ಮೇಟಿ ಕುಟುಂಬದ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!