ಹೊಸದಿಗಂತ ಡಿಜಿಟಲ್ ಡೆಸ್ಕ್:
ತೆಲುಗು ನಟ ನಂದು ಎಲ್ಲರಿಗೂ ಚಿರಪರಿಚಿತ. 2006 ರಲ್ಲಿ ತೆಲುಗಿನ `ಫೋಟೋ’ ಚಿತ್ರದ ಮೂಲಕ ನಾಯಕನಾಗಿ ಪಾದಾರ್ಪಣೆ ಮಾಡಿದ ನಂದು ನಂತರ ಹೀರೋ, ಸೆಕೆಂಡ್ ಹೀರೋ ಮತ್ತು ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ಕ್ರಿಕೆಟ್ ಹೋಸ್ಟ್ ಆಗಿಬಿಟ್ಟಿದ್ದಾರೆ. ಕಳೆದ ಕೆಲವು ವರ್ಷಗಳಿಂದ, ಭಾರತದಲ್ಲಿ ಅನೇಕ ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸುವ ಮತ್ತು ಕಾಮೆಂಟ್ ಮಾಡುವ ಮೂಲಕ ಪ್ರೇಕ್ಷಕರನ್ನು ಸಂತೋಷಪಡಿಸುತ್ತಿದ್ದಾರೆ. ಐಪಿಎಲ್ ಪಂದ್ಯಗಳಿಂದ ರಾಷ್ಟ್ರೀಯ ಪಂದ್ಯಗಳವರೆಗೆ ಈ ನಟನದ್ದೇ ಹವಾ.
ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ನಡೆದ ವಿಶ್ವಕಪ್ ಪಂದ್ಯಕ್ಕೂ ನಂದು ತೆಲುಗು ಹೋಸ್ಟ್ ಆಗಿ ಆಯ್ಕೆಯಾಗಿದ್ದು, ಪ್ರೇಕ್ಷಕರನ್ನು ರಂಜಿಸಿದ್ದರು. ತ್ತೀಚೆಗೆ ವಿಶ್ವಕಪ್ ಟ್ರೋಫಿಯೊಂದಿಗೆ, ನಂದು ಸ್ಟಾರ್ ಸ್ಪೋರ್ಟ್ಸ್ ತೆಲುಗು ಮೈಕ್‌ನೊಂದಿಗೆ ಕ್ರೀಡಾಂಗಣದಲ್ಲಿನ ಅವರ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಈ ಕುರಿತು ಭಾವನಾತ್ಮಕವಾಗಿ ಬರೆದುಕೊಂಡಿರುವ ನಂದು..ʻನನ್ನ ಬೀದಿಯಲ್ಲಿ ಗಲ್ಲಿ ಕ್ರಿಕೆಟ್ ಆಡುವುದರಿಂದ ಹಿಡಿದು ವಿಶ್ವಕಪ್‌ನಲ್ಲಿ ಕ್ರೀಡಾ ನಿರೂಪಕನಾಗುವವರೆಗೆ, ಏನೇ ಆದರೂ ನಾನು ನನ್ನನ್ನು ನಂಬಿದ್ದೇನೆ. ಅದಕ್ಕಾಗಿಯೇ ನಾನು ಇಂದು ಇಲ್ಲಿದ್ದೇನೆ. ನನಗೆ ಈ ಅವಕಾಶ ನೀಡಿದ ಸ್ಟಾರ್ ಸ್ಪೋರ್ಟ್ಸ್ ತೆಲುಗು ಧನ್ಯವಾದಗಳುʼ ಎಂದು ಪೋಸ್ಟ್ ಮಾಡಿದ್ದಾರೆ.