ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ಮೂಲದ ಖ್ಯಾತ ಯೂಟ್ಯೂಬರ್ ನಿಹಾರಿಕಾ ಎನ್.ಎಂ ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ವಿಷಯಗಳ ಮೂಲಕ ಸದ್ದು ಮಾಡುತ್ತಿದ್ದಾರೆ. ಈಗ ನಿಹಾರಿಕಾ ನಾಯಕಿಯಾಗಿ ತೆರೆ ಮೇಲೆ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ.
ನಿಹಾರಿಕಾ ಈಗ ಕಂಟೆಂಟ್ ಕ್ರಿಯೇಟರ್ನಿಂದ ನಾಯಕಿಯಾಗಿ ಬದಲಾಗಿದ್ದಾರೆ. ತಮಿಳು ಸಿನಿಮಾಗಳ ಮೂಲಕ ಎಂಟ್ರಿ ಕೊಡ್ತಿದ್ದಾರೆ. ನಿಹಾರಿಕಾ ನಾಯಕಿಯಾಗಿ ಕಾಣಿಸಿಕೊಳ್ಳಲಿರುವ ಈ ಚಿತ್ರವನ್ನು ದಕ್ಷಿಣದ ಖ್ಯಾತ ನಿರ್ಮಾಣ ಸಂಸ್ಥೆ ಲೈಕಾ ನಿರ್ಮಿಸುತ್ತಿದೆ. ಅಥರ್ವ ಈ ಚಿತ್ರದ ನಾಯಕನಾಗಿದ್ದು, ಆಕಾಶ್ ಭಾಸ್ಕರನ್ ಈ ಚಿತ್ರವನ್ನ ನಿರ್ದೇಶಿಸಲಿದ್ದಾರೆ.