August 1, 2026
Saturday, August 1, 2026
spot_img

CINE | ‘ರಣಬಾಲಿ’ ಶೂಟಿಂಗ್ ಸೆಟ್‌ನಲ್ಲಿ ಅವಘಡ: ನ್ಯಾಷನಲ್ ಕ್ರಶ್ ರಶ್ಮಿಕಾಗೆ ಗಂಭೀರ ಗಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಸ್ಯಾಂಡಲ್‌ವುಡ್‌ನಿಂದ ಕೆರಿಯರ್ ಆರಂಭಿಸಿ ಇಂದು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿರುವ ನಟಿ ರಶ್ಮಿಕಾ ಮಂದಣ್ಣ ಅವರಿಗೆ ಶೂಟಿಂಗ್ ಸೆಟ್‌ನಲ್ಲಿ ಗಂಭೀರ ಗಾಯವಾಗಿದೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದ ನಟಿಗೆ ಸೊಂಟದ ಭಾಗಕ್ಕೆ ತೀವ್ರ ಪೆಟ್ಟಾಗಿದ್ದು, ವೈದ್ಯರು ಮುಂದಿನ 6 ವಾರಗಳ ಕಾಲ ಕಡ್ಡಾಯವಾಗಿ ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದಾರೆ.‌

ಬ್ಯಾಕ್ ಟು ಬ್ಯಾಕ್ ಶೂಟಿಂಗ್ ವೇಳೆ ಅಪಘಾತ:

ಸದ್ಯ ರಶ್ಮಿಕಾ ಮಂದಣ್ಣ ‘ರಣಬಾಲಿ’ ಹಾಗೂ ‘ಮೈಸಾ’ ಚಿತ್ರಗಳ ಕೆಲಸಗಳನ್ನು ಒಟ್ಟೊಟ್ಟಿಗೆ ಮಾಡುತ್ತಿದ್ದಾರೆ. ಈ ಎರಡೂ ಸಿನಿಮಾಗಳ ಚಿತ್ರೀಕರಣದ ವೇಳೆಯೇ ಅವರ ಸೊಂಟದ ಭಾಗಕ್ಕೆ ತೀವ್ರವಾದ ಗಾಯವಾಗಿದೆ ಎಂದು ತಿಳಿದುಬಂದಿದೆ. ಸದ್ಯಕ್ಕೆ ಚಿತ್ರೀಕರಣದ ಕೆಲಸಗಳಿಗೆ ಬ್ರೇಕ್ ಹಾಕಿರುವ ರಶ್ಮಿಕಾ, ಸಂಪೂರ್ಣವಾಗಿ ಬೆಡ್ ರೆಸ್ಟ್‌ನಲ್ಲಿದ್ದಾರೆ.

ಇದನ್ನೂ ಓದಿ:

ಸಿನಿಮಾಗಳ ಮುಂದೂಡಿಕೆ ಸಾಧ್ಯತೆ:

ಪುಷ್ಪ ಚಿತ್ರದ ‘ಶ್ರೀವಲ್ಲಿ’ ಪಾತ್ರದ ಮೂಲಕ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದ್ದ ರಶ್ಮಿಕಾ, ಸಾಲು ಸಾಲು ದೊಡ್ಡ ಬಜೆಟ್ ಸಿನಿಮಾಗಳನ್ನು ಕೈಯಲ್ಲಿಟ್ಟುಕೊಂಡಿದ್ದಾರೆ. ಆದರೆ ಈಗ ದಿಢೀರನೆ 6 ವಾರಗಳ ಕಾಲ ಚಿತ್ರೀಕರಣದಿಂದ ದೂರ ಉಳಿಯಬೇಕಾಗಿ ಬಂದಿರುವುದರಿಂದ, ಅವರು ನಟಿಸುತ್ತಿರುವ ‘ರಣಬಾಲಿ’ ಹಾಗೂ ‘ಮೈಸಾ’ ಚಿತ್ರಗಳ ಶೂಟಿಂಗ್ ಶೆಡ್ಯೂಲ್‌ನಲ್ಲಿ ಭಾರೀ ಬದಲಾವಣೆಯಾಗುವ ಸಾಧ್ಯತೆಯಿದೆ. ರಶ್ಮಿಕಾ ಮಂದಣ್ಣ ಶೀಘ್ರವಾಗಿ ಗುಣಮುಖರಾಗಲಿ ಎಂದು ಅವರ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !