ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಸಿನಿಮಾ ಬಿಡುಗಡೆ ಆಗಿ ಎರಡು ತಿಂಗಳಾಗುತ್ತಾ ಬಂದಿದೆ. ಡಿಸೆಂಬರ್ 5 ರಂದು ಈ ಸಿನಿಮಾ ತೆರೆಗೆ ಬಂದಿತ್ತು. ಬಾಕ್ಸ್ ಆಫೀಸ್ನಲ್ಲಿ ಹೊಸ ದಾಖಲೆಗಳನ್ನೇ ಬರೆದಿದೆ ಈ ಸಿನಿಮಾ. ಇದೀಗ ಈ ಸಿನಿಮಾ ಒಟಿಟಿಯಲ್ಲಿ ಬರುತ್ತಿದ್ದು, ಒಟಿಟಿಯಲ್ಲಿ ಪುಷ್ಪನಿಗೆ ವಿಶೇಷ ಗೌರವ ದೊರೆತಿದೆ.
ಪುಷ್ಪ, ‘ನೆಟ್ಫ್ಲಿಕ್ಸ್’ ಮೇಲೆ ಕಬ್ಜ ಮಾಡಿಕೊಂಡಿದ್ದಾರೆ, ಸ್ವತಃ ನೆಟ್ಫ್ಲಿಕ್ಸ್ ಹೀಗೆ ಹೇಳಿಕೊಂಡಿದೆ. ನೆಟ್ಫ್ಲಿಕ್ಸ್ ಇಂಡಿಯಾದ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ‘ಪುಷ್ಪ 2’ ಸಿನಿಮಾದ ಅಪ್ಡೇಟ್ಗಳು ಹರಿದಾಡುತ್ತಿದ್ದು, ಅಧಿಕೃತ ಸಾಮಾಜಿಕ ಜಾಲತಾಣ ಪೇಜ್ನಲ್ಲಿ ‘ಈ ಪೇಜ್ ಈಗ ಪುಷ್ಪನ ಆಡಳಿತಕ್ಕೆ ಒಳಪಟ್ಟಿದೆ’ ಎಂದು ಬರೆಯಲಾಗಿದೆ. ಆ ಮೂಲಕ ‘ಪುಷ್ಪ 2’ ಸಿನಿಮಾಕ್ಕೆ ವಿಶೇಷ ಗೌರವ ನೀಡಲಾಗಿದೆ.