ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಯಾಂಡಲ್‌ವುಡ್‌ನಲ್ಲಿ ಬಹು ನಿರೀಕ್ಷೆ ಮೂಡಿಸಿರುವ ‘KD’ ಸಿನಿಮಾ ಮತ್ತೆ ಸುದ್ದಿಯ ಕೇಂದ್ರಬಿಂದುವಾಗಿದೆ. ಜೋಗಿ ಪ್ರೇಮ್ ನಿರ್ದೇಶನದಲ್ಲಿ ಧ್ರುವ ಸರ್ಜಾ ನಟಿಸಿರುವ ಈ ಚಿತ್ರ ಈಗ ತನ್ನ ಮುಂದಿನ ಹಾಡಿನ ಅಪ್‌ಡೇಟ್ ಮೂಲಕ ಸಿನಿ ಅಭಿಮಾನಿಗಳ ಗಮನ ಸೆಳೆಯುತ್ತಿದೆ.
ಈಗಾಗಲೇ ‘ಸೆರಗ ಸರ್ಸೆ’ ಹಾಡಿನ ಮೂಲಕ ದೇಶಾದ್ಯಂತ ಚರ್ಚೆಗೆ ಕಾರಣವಾಗಿದ್ದ ತಂಡ, ಮತ್ತೊಂದು ಹೊಸ ಸಾಂಗ್ ಬಿಡುಗಡೆಗೆ ಸಜ್ಜಾಗಿದೆ.
ಇದನ್ನೂ ಓದಿ:
ಕೆವಿಎನ್ ಪ್ರೊಡಕ್ಷನ್ಸ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪೋಸ್ಟ್‌ನಲ್ಲಿ, ಮುಂದಿನ ಸಿಂಗಲ್ ಕುರಿತ ಮಾಹಿತಿ ಏಪ್ರಿಲ್ 6ರಂದು ಸಂಜೆ 4.05ಕ್ಕೆ ಬಿಡುಗಡೆಯಾಗಲಿದೆ ಎಂದು ತಿಳಿಸಿದೆ. ಪೋಸ್ಟ್‌ನಲ್ಲಿರುವ “ನನ್ನ ಮೌನದಲ್ಲಿ ಡೆವಿಲ್ ಇದೆ, ನನ್ನ ಕೋಪದಲ್ಲಿ ದೇವರು ಇದ್ದಾನೆ” ಎಂಬ ಡೈಲಾಗ್ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ.
ಧ್ರುವ ಸರ್ಜಾ ಜೊತೆಗೆ ಶಿಲ್ಪಾ ಶೆಟ್ಟಿ, ಸಂಜಯ್ ದತ್ ಮತ್ತು ರಚನಾ ರೈ ಅಭಿನಯಿಸಿರುವ ಈ ಚಿತ್ರ ಏಪ್ರಿಲ್ 30ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ಅದೇ ದಿನ ಮತ್ತೊಂದು ಬಹು ನಿರೀಕ್ಷಿತ ಸಿನಿಮಾ ‘ಪೆದ್ದಿ’ ಕೂಡ ಬಿಡುಗಡೆಯಾಗುತ್ತಿರುವುದರಿಂದ ಬಾಕ್ಸ್ ಆಫೀಸ್ ಪೈಪೋಟಿ ಬಗ್ಗೆ ಈಗಾಗಲೇ ಚರ್ಚೆಗಳು ಶುರುವಾಗಿದೆ.



