CINE | ಸೋನು ನಿಗಮ್ ಗೆ ಬಿಗ್ ಶಾಕ್: ಕನ್ನಡದ ಈ ಸಿನಿಮಾದಲ್ಲಿ ಗಾಯಕನ ಹಾಡು ಕ್ಯಾನ್ಸಲ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕನ್ನಡ ಹಾಡು ಹಾಡಿ ಅಂದಿದ್ದಕ್ಕೆ ಇದಕ್ಕೆ ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಯಾಗಿದ್ದು ಎಂದು ಹೇಳಿ ಸೋನು ನಿಗಮ್ ಭಾರಿ ವಿವಾದಕ್ಕೆ ಗುರಿಯಾಗಿದ್ದರು. ಈ ವಿವಾದಾತ್ಮಕ ಹೇಳಿಕೆಯ ಬೆನ್ನಲ್ಲೇ ಎಲ್ಲೆಡೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಸೋನು ನಿಗಮ್ ಅವರನ್ನು ಕನ್ನಡ ಚಲನಚಿತ್ರದಿಂದ ಬ್ಯಾನ್ ಮಾಡಲು ನಿರ್ಧಾರ ಮಾಡಲಾಯಿತು.

ಈಗ ಈ ಬ್ಯಾನ್ ಬೆನ್ನಲ್ಲೇ ಸೋನು ನಿಗಮ್ ಹಾಡಿದ್ದ ಹಾಡನ್ನು ಚಿತ್ರ ತಂಡವೊಂದು ತಮ್ಮ ಸಿನಿಮಾದಿಂದ ಕೈಬಿಟ್ಟಿದೆ. ಕುಲದಲ್ಲಿ ಕೀಳ್ಯಾವುದೋ ಚಿತ್ರತಂಡ ಈ ದಿಟ್ಟ ನಿರ್ಧಾರ ತೆಗೆದುಕೊಂಡಿದೆ. ಈಗಾಗಲೇ ಈ ಚಿತ್ರಕ್ಕೆ ಸೋನು ನಿಗಮ್ ಹಾಡು ಹಾಡಿದ್ದರು.

ಚಿತ್ರ ನಿರ್ದೇಶಕ ರಾಮ್ ನಾರಾಯಣ್ ಈ ಬಗ್ಗೆ ಮಾತನಾಡಿ, ಕನ್ನಡಕ್ಕೆ ಮಾಡಿರುವ ಅವಮಾನಕ್ಕೆ ನಾವು ಈ ನಿರ್ಧಾರ ಮಾಡಿದ್ದೇವೆ ಎಂದಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!