ಹೊಸದಿಗಂತ ಡಿಜಿಟಲ್ ಡೆಸ್ಕ್:
ಸದಾ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದ ಬಾಲಿವುಡ್ ಬೆಡಗಿ ಜಾನ್ವಿ ಕಪೂರ್ ಈಗ ಬಾಯಿಯಲ್ಲಿ ಚಾಕು ಹಿಡಿದು ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ಹೌದು, ‘ದೇವರ 2’ ಸಿನಿಮಾದಲ್ಲಿನ ನಟಿಯ ಪೋಸ್ಟರ್ ಅನ್ನು ಚಿತ್ರತಂಡ ರಿಲೀಸ್ ಮಾಡಿ ಫ್ಯಾನ್ಸ್ ಗೆ ಅಪ್‌ಡೇಟ್ ಕೊಟ್ಟಿದೆ.
‘ದೇವರ 2’ನಲ್ಲಿ ಹಳ್ಳಿಯ ಹುಡುಗಿಯ ಲುಕ್‌ನಲ್ಲಿ ಜಾನ್ವಿ ಮಿಂಚಿದ್ದಾರೆ. ನಟಿಯ ಹುಟ್ಟುಹಬ್ಬದ ಪ್ರಯುಕ್ತ ಚಿತ್ರತಂಡ ಸರ್ಪ್ರೈಸ್ ಕೊಟ್ಟಿದೆ. ಜೊತೆಗೆ ಈ ಸಿನಿಮಾದ ಪಾರ್ಟ್ 2 ಬರಲ್ಲ ಎಂದವರಿಗೆ ನಟಿಯ ಪೋಸ್ಟರ್ ರಿಲೀಸ್ ಮಾಡಿ ಬಿಗ್ ಶಾಕ್ ನೀಡಿದೆ.