ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ಖ್ಯಾತ ನಟ ಸಂಜಯ್ ದತ್ ಹಾಗೂ ಸ್ಯಾಂಡಲ್ವುಡ್ ಬಾಕ್ಸ್ ಆಫೀಸ್ ಸುಲ್ತಾನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಒಂದೇ ಫ್ರೇಮ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ಸದ್ಯ ಹಲವು ಸಿನಿಮಾದಲ್ಲಿ ಫುಲ್ ಬ್ಯುಸಿಯಾಗಿರುವ ಸಂಜಯ್ ದತ್ ಇದೀಗ ಕೆವಿಎನ್ ಪ್ರೊಡಕ್ಷನ್ ಹಾಗೂ ನಟ, ನಿರ್ದೇಶಕ ಪ್ರೇಮ್ ಅವರ ಮುಂದಿನ ನಿರ್ದೇಶನದ ಚಿತ್ರ “ಕೆಡಿ” ಟೀಮ್ ಜೊತೆ ಸಂಜಯ್ ದತ್ ಫೋಟೋ ತೆಗೆಸಿಕೊಂಡಿದ್ದಾರೆ.
ಈ ಚಿತ್ರದಲ್ಲಿ ನಟ ಧ್ರುವ ಸರ್ಜಾ ನಟಿಸಲಿದ್ದು, ಪ್ರೇಮ್ ಆಕ್ಷನ್ ಕಟ್ ಹೇಳಿದ್ದಾರೆ. ಇನ್ನು ಈ ಚಿತ್ರ ತಂಡದ ಜೊತೆ ನಟ ದರ್ಶನ್ ಕೂಡ ಕಾಣಿಸಿಕೊಂಡಿದ್ದು ಈ ಫೋಟೋ ಇದೀಗ ಸಕ್ಕತ್ ವೈರಲ್ ಆಗ್ತಿದೆ. ಈ ಪೋಸ್ಟ್ ಅನ್ನು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿರುವ ಕೆವಿಎನ್ ಪ್ರೊಡಕ್ಷನ್ ಸಂಸ್ಥೆ “ಇದೊಂದು ವಿಶೇಷ ಭೇಟಿ, ವಿಶೇಷ ಕ್ಷಣಗಳು” ಎಂದು ಕ್ಯಾಪ್ಶನ್ ನೀಡಿದೆ.
ಈ ಸಮಯದಲ್ಲಿ ನಟಿ ರಕ್ಷಿತಾ ಕೂಡ ಫ್ರೇಮ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ಮುಂದಿನ ದರ್ಶನ್ ಹಾಗೂ ಪ್ರೇಮ್ ಚಿತ್ರದಲ್ಲಿ ಸಂಜಯ್ ದತ್ ಇರಬಹುದ ಎಂಬ ಪ್ರಶ್ನೆ ಹುಟ್ಟಿಹಾಕಿದೆ.