ಈ ಮರಗಳನ್ನು ಕಡಿದುಬಿಡಿ, ಬಿಬಿಎಂಪಿಗೆ ಬಂತು 2,000 ಅರ್ಜಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಈ ರುಬಿಸಿಲಿನಲ್ಲಿ ರಸ್ತೆಯಲ್ಲಿ ಟು ವ್ಹೀಲರ್ ಓಡಿಸೋರಿಗೆ ಗೊತ್ತು ಮರಗಳ ಬೆಲೆ ಏನು ಅಂತ! ರಸ್ತೆ ಬದಿಯಲ್ಲಿ ಎರಡು ಮರಗಳ ದಾರಿಯ ಮಧ್ಯೆ ಹೋಗುವಾಗ ಸಿಗುವ ಹಾಯಾದ ಅನುಭವಕ್ಕೆ ಮಾತೇ ಇಲ್ಲ.

ಆದರೆ ರಿಯಾಲಿಟಿ ಬೇರೇನೇ ಇದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಪಾಯ ಹಾಗೂ ಅಡೆತಡೆಗಳನ್ನು ಉಂಟುಮಾಡುವ ಮರಗಳನ್ನು ಕಡಿಯಲು ಸಾರ್ವಜನಿಕರಿಗೆ ಅರ್ಜಿ ಹಾಕುವಂತೆ ಹೇಳಿತ್ತು.

ಇದಕ್ಕೆ ಉತ್ತಮ ಸ್ಪಂದನೆ ಸಿಕ್ಕಿದ್ದು, ಬರೀ 48 ಗಂಟೆಯಲ್ಲಿ ಒಟ್ಟಾರೆ 2,000 ಮರಗಳನ್ನು ಕಡಿಯಬೇಕು ಎನ್ನುವ ಅರ್ಜಿಗಳು ಬಂದಿವೆ. ಆದರೆ ಈ ಎಲ್ಲ ಮರಗಳನ್ನು ಕಡಿಯುವುದಿಲ್ಲ. ಸಂಚಾರಿ ಇಲಾಖೆಯೊಂದಿಗೆ ಸಮೀಕ್ಷೆ ಹಾಗೂ ಸಮಾಲೋಚನೆ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ವಿಭಾಗದ ಅಧಿಕಾರಿಗಳು ಹೇಳಿದ್ದಾರೆ.

ಮರಗಳನ್ನು ಕಡಿಯುವ ಬದಲು, ಕೆಲ ಕೊಂಬೆಗಳನ್ನು ಕಡಿದು ಮರಗಳನ್ನು ಉಳಿಸುಕೊಳ್ಳುವ ಬಗ್ಗೆ ಆಲೋಚನೆ ಮಾಡಲಾಗುತ್ತಿದೆ. ಸತ್ತ ಮರಗಳು ಅತೀ ಹಳೆಯ ಮರಗಳ ಬಗ್ಗೆ ಆಲೋಚನೆ ಮಾಡಲಾಗುತ್ತಿದೆ. ಜೀವ ಇಲ್ಲದೆ ಎಂದಾದರೂ ಏಕಾಏಕಿ ಬಿದ್ದು ಹೋದರೆ ಸಾಕಷ್ಟು ಜನರಿಗೆ ಹಾನಿ ಹಾಗೂ ಸಂಚಾರಕ್ಕೆ ತೊಂದರೆಯಾಗುತ್ತದೆ. ಮರಗಳ ಪಟ್ಟಿ ಮಾಡಿ, ಸ್ಥಳಾಂತರದ ಬಗ್ಗೆ ಆಲೋಚಿಸಿದರೆ ಹಸಿರು ಉಳಿಸಬಹುದು ಎಂದೂ ಆಲೋಚಿಸಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!