August 4, 2026
Tuesday, August 4, 2026
spot_img

CINE| “ನಾನ್ ಬರ್ತಿದ್ದೀನಿ ಚಿನ್ನ” ಅಂತ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟ ಡಿ-ಬಾಸ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು ಕಳೆದ ಆರು ತಿಂಗಳುಗಳಿಂದ ಕಾತುರದಿಂದ ಕಾಯುತ್ತಿದ್ದ ಆ ಒಂದು ಸುದಿನ ಕೊನೆಗೂ ಬಂದಿದೆ. ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಬಳಿಕ ಯಾವುದೇ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಪ್ರಸಾರವಾಗದೆ ನಿರೀಕ್ಷೆ ಮೂಡಿಸಿದ್ದ ದರ್ಶನ್ ಅಭಿನಯದ ‘ಡೆವಿಲ್’ ಸಿನಿಮಾ ಈಗ ಒಟಿಟಿ ಹಾಗೂ ಟಿವಿಗೆ ಏಕಕಾಲದಲ್ಲಿ ಲಗ್ಗೆ ಇಡಲು ಸಜ್ಜಾಗಿದೆ. “ನಾನ್ ಬರ್ತಿದ್ದೀನಿ ಚಿನ್ನ” ಎಂಬ ಡೈಲಾಗ್ ಶೈಲಿಯಲ್ಲಿ ಸ್ಯಾಂಡಲ್‌ವುಡ್‌ನ ಬಾಕ್ಸಾಫೀಸ್ ಸುಲ್ತಾನ್‌ನ ಸಿನಿಮಾ ಬಿಡುಗಡೆಗೆ ಕೌಂಟ್‌ಡೌನ್ ಶುರುವಾಗಿದೆ.

Zee5 ವಶಕ್ಕೆ ಡಿಜಿಟಲ್ ಹಕ್ಕುಗಳು

ದರ್ಶನ್ ಜೈಲಿನಲ್ಲಿದ್ದ ಸಂದರ್ಭದಲ್ಲೇ ಥಿಯೇಟರ್‌ಗಳಲ್ಲಿ ತೆರೆಕಂಡಿದ್ದ ‘ಡೆವಿಲ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸಾಧಾರಣ ಯಶಸ್ಸು ಕಂಡಿತ್ತು. ಆದರೆ, ಸಿನಿಮಾ ರಿಲೀಸ್ ಆಗಿ ಆರು ತಿಂಗಳು ಕಳೆದರೂ ಒಟಿಟಿಗೆ ಬಾರದ ಹಿನ್ನೆಲೆಯಲ್ಲಿ ಅಭಿಮಾನಿಗಳಲ್ಲಿ ತೀವ್ರ ನಿರಾಶೆ ಮೂಡಿತ್ತು. ಇದೀಗ ಖ್ಯಾತ ಒಟಿಟಿ ಸಂಸ್ಥೆ ಝೀ5 ‘ಡೆವಿಲ್’ ಚಿತ್ರದ ಡಿಜಿಟಲ್ ಹಾಗೂ ಸ್ಯಾಟಲೈಟ್ ಹಕ್ಕುಗಳನ್ನು ದೊಡ್ಡ ಮೊತ್ತಕ್ಕೆ ಖರೀದಿಸಿದೆ ಎಂದು ತಿಳಿದುಬಂದಿದೆ.

ಒಟ್ಟಿಗೆ ಸಿಗಲಿದೆ ಟಿವಿ ಮತ್ತು ಒಟಿಟಿ ದರ್ಶನ ಭಾಗ್ಯ!

ಸಾಮಾನ್ಯವಾಗಿ ಸಿನಿಮಾಗಳು ಮೊದಲು ಚಿತ್ರಮಂದಿರ, ನಂತರ ಓಟಿಟಿ ಹಾಗೂ ಕೊನೆಯದಾಗಿ ಟಿವಿಯಲ್ಲಿ ಪ್ರಸಾರವಾಗುತ್ತವೆ. ಆದರೆ ‘ಡೆವಿಲ್’ ಚಿತ್ರದ ವಿಷಯದಲ್ಲಿ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಟಿವಿ ಚಾನೆಲ್ ಹಾಗೂ ಓಟಿಟಿ ವೇದಿಕೆ ಎರಡರಲ್ಲೂ ಶೀಘ್ರದಲ್ಲೇ ಏಕಕಾಲಕ್ಕೆ ಸಿನಿಮಾ ಪ್ರಸಾರವಾಗಲಿದೆ ಎನ್ನಲಾಗಿದೆ. ಇದರಿಂದಾಗಿ ದರ್ಶನ್‌ನ್ನು ತೆರೆಮೇಲೆ ನೋಡಲು ಕಾಯುತ್ತಿದ್ದ ಕೋಟ್ಯಂತರ ಅಭಿಮಾನಿಗಳಿಗೆ ದೊಡ್ಡ ಹಬ್ಬದ ಉಡುಗೊರೆ ಸಿಕ್ಕಂತಾಗಿದೆ.

ಇದನ್ನೂ ಓದಿ:

ಸೋಶಿಯಲ್ ಮೀಡಿಯಾದಲ್ಲಿ ಡಿ-ಬಾಸ್ ಕ್ರೇಜ್

ಈ ಸುದ್ದಿ ಹೊರಬೀಳುತ್ತಿದ್ದಂತೆಯೇ ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ಅಭಿಮಾನಿಗಳು ಹಳೇ ಟ್ರೆಂಡ್‌ಗಳನ್ನು ಮರುಸೃಷ್ಟಿಸಿ ಸಂಭ್ರಮಿಸುತ್ತಿದ್ದಾರೆ. ಚಿತ್ರದ ಅಧಿಕೃತ ಪ್ರಸಾರದ ದಿನಾಂಕವನ್ನು ಝೀ5 ಸಂಸ್ಥೆಯು ಮುಂದಿನ ಒಂದೆರಡು ದಿನಗಳಲ್ಲಿ ಅಧಿಕೃತವಾಗಿ ಟೀಸರ್ ಅಥವಾ ಪೋಸ್ಟರ್ ಮೂಲಕ ಪ್ರಕಟಿಸಲಿದೆ ಎಂದು ಗಾಂಧಿನಗರದ ಮೂಲಗಳು ತಿಳಿಸಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !