August 4, 2026
Tuesday, August 4, 2026
spot_img

ಹಸೆಮಣೆ ಏರುವ ಮುನ್ನವೇ ದೂರಾದ್ರು ಸ್ಟಾರ್ ಜೋಡಿ; ಬ್ರೇಕಪ್‌ಗೆ ಅಸಲಿ ಕಾರಣವೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸ್ಯಾಂಡಲ್‌ವುಡ್, ಟಾಲಿವುಡ್ ಹಾಗೂ ಕಾಲಿವುಡ್‌ನಲ್ಲಿ ಸದ್ಯ ಧನುಷ್ ಮತ್ತು ಮೃಣಾಲ್ ಠಾಕೂರ್ ವಿರಹದ ಸುದ್ದಿಯೇ ಸಖತ್ ಸೌಂಡ್ ಮಾಡುತ್ತಿದೆ. ಕಳೆದ ಕೆಲವು ತಿಂಗಳುಗಳಿಂದ ಈ ಇಬ್ಬರು ತಾರೆಯರು ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ ಮತ್ತು ಮುಂಬರುವ ಫೆಬ್ರವರಿಯಲ್ಲಿ ವಿವಾಹವಾಗಲಿದ್ದಾರೆ ಎಂಬ ಬಲವಾದ ವದಂತಿಗಳು ಹರಿದಾಡುತ್ತಿದ್ದವು. ಹಲವು ಸಾರ್ವಜನಿಕ ಸಮಾರಂಭಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದ ಈ ಜೋಡಿಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.

ಮದುವೆಗೂ ಮುನ್ನವೇ ದೂರಾದ ಜೋಡಿ

ಆದರೆ, ಈಗ ಈ ಪ್ರೇಮ ಪಕ್ಷಿಗಳ ಅಭಿಮಾನಿಗಳಿಗೆ ಭಾರಿ ನಿರಾಸೆಯಾಗುವಂತಹ ಸುದ್ದಿಯೊಂದು ಹೊರಬಿದ್ದಿದೆ. ಧನುಷ್ ಮತ್ತು ಮೃಣಾಲ್ ಠಾಕೂರ್ ತಮ್ಮ ಸಂಬಂಧಕ್ಕೆ ಬ್ರೇಕಪ್ ಹೇಳಿದ್ದಾರೆ ಎನ್ನಲಾಗಿದೆ. ಹಸೆಮಣೆ ಏರುವ ಮುನ್ನವೇ ಇಬ್ಬರ ನಡುವಿನ ಪ್ರೀತಿಯ ಬಾಂಧವ್ಯ ಮುರಿದುಬಿದ್ದಿದೆ ಎಂಬ ಸುದ್ದಿ ಸಿನಿರಂಗದಲ್ಲಿ ಸಂಚಲನ ಸೃಷ್ಟಿಸಿದೆ.

ಬ್ರೇಕಪ್‌ಗೆ ಕಾರಣವೇನು?

ಮೂಲಗಳ ಪ್ರಕಾರ, ಇಬ್ಬರೂ ಯಾವುದೇ ಗಲಾಟೆ ಮಾಡಿಕೊಳ್ಳದೆ, ಪರಸ್ಪರ ಒಪ್ಪಿಗೆಯಿಂದಲೇ ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಆದರೆ, ಇಷ್ಟು ದಿನ ಪ್ರೀತಿಯಲ್ಲಿದ್ದ ಈ ಸ್ಟಾರ್ ಜೋಡಿ ಹಠಾತ್ ಆಗಿ ದೂರಾಗಲು ನಿಖರವಾದ ಕಾರಣವೇನು ಎಂಬುದು ಇನ್ನು ಬಹಿರಂಗವಾಗಿಲ್ಲ. ಇಬ್ಬರೂ ಅಧಿಕೃತವಾಗಿ ಈ ಬಗ್ಗೆ ಎಲ್ಲಿಯೂ ಪ್ರತಿಕ್ರಿಯಿಸಿಲ್ಲವಾದರೂ, ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ ಇವರ ಬ್ರೇಕಪ್ ಸುದ್ದಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !