CINE | ದಳಪತಿ ವಿಜಯ್ ಕೊನೆ ಚಿತ್ರಕ್ಕೆ ಶೀರ್ಷಿಕೆ ಕನ್ಫರ್ಮ್: 69ನೇ ಚಿತ್ರಕ್ಕೆ ಏನಿರಬಹುದು ಟೈಟಲ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಳಪತಿ ವಿಜಯ್ ಕೊನೆ ಚಿತ್ರಕ್ಕೆ ಯಾವ ಶೀರ್ಷಿಕೆ ಇಡಲಾಗುತ್ತದೆ ಎಂಬ ಚರ್ಚೆಗೆ ಇದೀಗ ಉತ್ತರ ಸಿಕ್ಕಿದೆ. ಈ ಬಗ್ಗೆ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ ಕಡೆಯಿಂದ ಘೋಷಣೆ ಆಗಿದೆ. ಈ ಚಿತ್ರಕ್ಕೆ ‘ಜನ ನಾಯಗನ್’ ಎನ್ನುವ ಶೀರ್ಷಿಕೆ ಇಡಲಾಗಿದೆ.

ದಳಪತಿ ವಿಜಯ್ ಅವರು ಈಗ ಮಾಡುತ್ತಿರುವುದು ಅವರ ವೃತ್ತಿ ಜೀವನದ 69ನೇ ಸಿನಿಮಾ ಹಾಗೂ ಕಡೆಯ ಚಿತ್ರ. ಇದಾದ ಬಳಿಕ ಅವರು ಸಂಪೂರ್ಣವಾಗಿ ರಾಜಕೀಯದಲ್ಲಿ ತೊಡಗಿಕೊಳ್ಳಲು ನಿರ್ಧರಿಸಿದ್ದಾರೆ.

ಮುಂದಿನ ವರ್ಷ ತಮಿಳಿನಾಡಿನಲ್ಲಿ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಅವರು ಕೂಡ ಸ್ಪರ್ಧಿಸಲಿದ್ದಾರೆ. ಈ ಕಾರಣಕ್ಕೆ ಅವರ ಕೊನೆಯ ಚಿತ್ರವನ್ನು ರಾಜಕೀಯ ಹಿನ್ನೆಲೆ ಹೊಂದಿರಲಿದೆಯೇ ಎನ್ನುವ ಪ್ರಶ್ನೆ ಇದೀಗ ಅಭಿಮಾನಿಗಳಲ್ಲಿ ಮೂಡಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!