ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡ ಹಿರಿಯ ನಟ ಅನಂತನಾಗ್ ಅವರಿಗೆ ಪದ್ಮಭೂಷಣ ಸೇರಿದಂತೆ ಒಟ್ಟು ಈ ಬಾರಿ ರಾಜ್ಯಕ್ಕೆ 9 ಪದ್ಮ ಪ್ರಶಸ್ತಿ ದೊರಕಿವೆ.
ಪ್ರಶಸ್ತಿ ಘೋಷಣೆಯಾದ ಬಳಿಕ ಮಾತನಾಡಿರುವ ಅನಂತ್ ನಾಗ್, ಈ ಪ್ರಶಸ್ತಿಯನ್ನು ನಾನು ಕರ್ನಾಟಕದ ಜನರಿಗೆ ಅರ್ಪಿಸುತ್ತೇನೆ. ಒಂದು ರೀತಿಯ ನಿರಾಳ ಭಾವ ನಲ್ಲಿ ಮೂಡಿತು. ನನಗಾಗಿ ಇಷ್ಟು ವರ್ಷ ನನ್ನನ್ನು ಬೆಂಬಲಿಸಿದ ಜನರಿಗೆ ಕೊನೆಗೂ ಸಂತೋಷವಾಗಲಿದೆ ಎಂದೆನಿಸಿತು ಎಂದಿದ್ದಾರೆ.
ನನಗೆ ಪದ್ಮ ಪ್ರಶಸ್ತಿ ಸಿಗಬೇಕು ಎಂದು ಜನ ಒತ್ತಾಯಿಸುತ್ತಲೇ ಬಂದಿದ್ದರು. ಇಂಥಹಾ ಚಳವಳಿಗಳು ಎಷ್ಟು ಕಾಲ ಇರುತ್ತವೆ? ಎಂದು ನನಗೆ ಅನಿಸಿತ್ತು. ಆದರೆ ಜನರ ಬೆಂಬಲ ಕೊನೆಯಾಗಲೇ ಇಲ್ಲ ಎಂದಿದ್ದಾರೆ .
ಮೋದಿಗೆ ಧನ್ಯವಾದ ತಿಳಿಸಿದ ಅನಂತ್ ನಾಗ್
ಪದ್ಮಭೂಷಣ ಪ್ರಶಸ್ತಿ ಪಡೆದ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೂ ನಟ ಅನಂತನಾಗ್ ಅವರು ಇದೇ ವೇಳೆ ಧನ್ಯವಾದ ತಿಳಿಸಿದ್ದಾರೆ.ಪ್ರಶಸ್ತಿಗಳ ಆಯ್ಕೆಯಲ್ಲಿ ಜನರ ಅಭಿಪ್ರಾಯವನ್ನೂ ಪಡೆಯುವ ಪದ್ಧತಿ ಆರಂಭವಾಗಿದ್ದರಿಂದಲೇ ಇದು ಸಾಧ್ಯವಾಯಿತು. ಇದಕ್ಕೆ ಮೋದಿ ಅವರಿಗೆ ಧನ್ಯವಾದ ಹೇಳಲೇ ಬೇಕು ಎಂದಿದ್ದಾರೆ.