CINE | ದಾಸನಿಗೆ ಇದೆಯಂತೆ ಹೀಗೊಂದು ಆಸೆ, ಆ ನಟನನ್ನು ನೋಡೋ ಬಯಕೆ! ಯಾರದು ಸ್ಟಾರ್ ನಟ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸ್ಟಾರ್ ಹೀರೋಗೆ ಅಭಿಮಾನಿಗಳ ದಂಡೇ ಇದೆ. ಅಂತೆಯೇ ಸ್ಟಾರ್ ಹೀರೋ ಕೂಡ ನಟನ ಅಭಿಮಾನಿ. ನಟ ದರ್ಶನ್ ಕೂಡ ಸ್ಟಾರ್ ಹೀರೋ. ಅವರು ಬಾಲಿವುಡ್ ಹೀರೋನ ಅಭಿಮಾನಿ. ಈ ಆಸೆಯನ್ನ ದರ್ಶನ್ ಈ ಹಿಂದೆ ಹೇಳಿದ್ದಾರೆ ಈ ವಿಡಿಯೋ ವೈರಲ್ ಆಗಿತ್ತು. ಅದರಲ್ಲಿ ದರ್ಶನ್ ತಮ್ಮ ನೆಚ್ಚಿನ ನಾಯಕನನ್ನು ಭೇಟಿ ಮಾಡುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ.

ದರ್ಶನ್ ಅಮಿತಾಬ್ ಬಚ್ಚನ್ ಅವರ ದೊಡ್ಡ ಅಭಿಮಾನಿ. ದರ್ಶನ್ ಕನ್ನಡದ ಸ್ಟಾರ್ ಹೀರೋ. ಅವರು ಅಮಿತಾಭ್ ಅವರನ್ನು ಭೇಟಿಯಾಗಬೇಕು ಎಂಬ ಆಸೆ ಹೊಂದಿದ್ದಾರೆ, ಆದರೆ, ಈ ಭೇಟಿ ಆ ರೀತಿ ಇರಬಾರದು ಅನ್ನೋದು ದರ್ಶನ್ ಆಸೆ. ಈ ಮೊದಲು ವಿಡಿಯೋ ಒಂದರಲ್ಲಿ ಹೇಳಿಕೊಂಡಿದ್ದರು.

ನಾನು ಅಮಿತಾಬ್ ಬಚ್ಚನ್ ಅವರನ್ನು ಭೇಟಿ ಮಾಡಲು ಬಯಸುತ್ತೇನೆ. ಆದರೆ ಹೀರೋ ಆಗಿ ಅವರನ್ನು ಭೇಟಿ ಮಾಡಬಾರದು. ಫ್ಯಾನ್ ಆಗಿ ಹೋಗಿ ಅವರನ್ನ ಭೇಟಿ ಮಾಡಬೇಕು ಎಂದು ಬಯಸಿದ್ದಾರೆ. ಮುಂಬೈನಲ್ಲಿ ನನಗೆ ಅನೇಕ ಸ್ನೇಹಿತರಿದ್ದಾರೆ. ಬಾರಣ್ಣ ಕರೆದುಕೊಂಡು ಹೋಗ್ತೀನಿ ಎನ್ನುತ್ತಾರೆ. ಸೌತ್ ಇಂಡಿಯಾದ ಹೀರೋ ಎಂದು ಹೇಳಿದಾಗ ಅವರು ವೆಲ್​ಕಮ್ ಮಾಡಿಯೇ ಮಾಡುತ್ತಾರೆ. ಜನರ ಮಧ್ಯೆ ನಿಂತು ಅವರನ್ನು ನೋಡಬೇಕು ಎಂದು ದರ್ಶನ್ ಬಯಸಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!