CINE | ಮತ್ತೆ ತೆರೆ ಹಂಚಿಕೊಳ್ಳಲಿದ್ದಾರೆ ದೀಪಿಕಾ ಪ್ರಭಾಸ್! ಈ ಜೋಡಿಯ ‘ಸ್ಪಿರಿಟ್’ ಹೇಗಿದೆ ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಲ್ಕಿ: 2898AD ಚಿತ್ರದಲ್ಲಿ ಮೋಡಿ ಮಾಡಿದ್ದ ದೀಪಿಕಾ ಪಡುಕೋಣೆ ಪ್ರಭಾಸ್ ಜೋಡಿ ಈಗ ಮತ್ತೆ ಸ್ಪಿರಿಟ್ ಚಿತ್ರದ ಮೂಲಕ ಒಂದಾಗಲಿದೆ ಎನ್ನುವ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಮೂಲಗಳ ಪ್ರಕಾರ, ದೀಪಿಕಾ ಪಡುಕೋಣೆ ಸ್ಪಿರಿಟ್ ನಲ್ಲಿ ನಟಿಸಬೇಕೆಂದು ಸಂದೀಪ್ ರೆಡ್ಡಿ ವಂಗಾ ಅವರು ಆರಂಭದಿಂದಲೂ ಅಂದುಕೊಂಡಿದ್ದರಂತೆ, ಆರಂಭದಲ್ಲಿ, ಸ್ಪಿರಿಟ್ 2024 ರ ಅಂತ್ಯದ ವೇಳೆಗೆ ಪ್ರಾರಂಭವಾಗಬೇಕಿತ್ತುಆದರೆ ಪ್ರೆಗ್ನೆನ್ಸಿ ಕಾರಣದಿಂದಾಗಿ ದೀಪಿಕಾ ಆಫರ್ ಅನ್ನು ತಿರಸ್ಕರಿಸಿದ್ದರು. ಆದಾಗ್ಯೂ, ವೇಳಾಪಟ್ಟಿಯಲ್ಲಿ ವಿಳಂಬವಾದ ಕಾರಣ, ಸಂದೀಪ್ ರೆಡ್ಡಿ ಮತ್ತೆ ದೀಪಿಕಾ ಅವರ ಬಳಿ ಹೋಗಿ ಈ ಸಿನಿಮಾ ಮಾಡುವಂತೆ ಒಪ್ಪಿಸಿದ್ದಾರೆ ಎನ್ನಲಾಗಿದೆ.

ಇದರ ಜೊತೆಗೆ ಜೊತೆಗೆ ದೀಪಿಕಾ ಕಿಂಗ್ ಮತ್ತು ಸ್ಪಿರಿಟ್ ಹೊರತುಪಡಿಸಿ, ಮತ್ತೊಂದು ಮೆಗಾ-ಬಜೆಟ್ ಚಲನಚಿತ್ರಕ್ಕಾಗಿ ಮಾತುಕತೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಸ್ಪಿರಿಟ್ ಚಿತ್ರ ಅಕ್ಟೋಬರ್ 2025 ರಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದ್ದು, 2027 ರ ಮೊದಲಾರ್ಧದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಸ್ಪಿರಿಟ್, ಕಿಂಗ್ ಮತ್ತು ಇನ್ನೊಂದು ಮೆಗಾ-ಬಜೆಟ್ ಚಲನಚಿತ್ರದ ಜೊತೆಗೆ, ದೀಪಿಕಾ ಅವರ ಕಲ್ಕಿ 2 ಮತ್ತು ಪಠಾಣ್ 2 ಚಿತ್ರಗಳು 2026 ರ ಕೊನೆಯಲ್ಲಿ/2027 ರ ಆರಂಭದಲ್ಲಿ ಬಿಡುಗಡೆಯಾಗಲಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!