ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಶ್ವತ್ ಮಾರಿಮುತ್ತು ನಿರ್ದೇಶನದ ಮತ್ತು ಉದಯೋನ್ಮುಖ ನಟ ಪ್ರದೀಪ್ ರಂಗನಾಥನ್, ಅನುಪಮಾ ಪರಮೇಶ್ವರನ್, ಮೈಸ್ಕಿನ್ ಮತ್ತು ಕಾಯದು ಲೋಹರ್ ನಟಿಸಿರುವ ಡ್ರ್ಯಾಗನ್ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ.
ಡ್ರ್ಯಾಗನ್ ಕಥೆಯು ಒಬ್ಬ ವಿದ್ಯಾರ್ಥಿಯ ಸುತ್ತ ಹೆಣೆದಿದ್ದು, ಕಥಾನಾಯಕ ತನ್ನ ಪ್ರೀತಿಯನ್ನು ವ್ಯಕ್ತಪಡಿಸುವಾಗ, ನಾಯಕಿ ಈತನಿಗಿಂತ ಬೇರೊಬ್ಬ ರೌಡಿಯನ್ನು ಇಷ್ಟಪಡುತ್ತಾಳೆ. ಇದು ನಾಯಕನನ್ನು ರೌಡಿಯಾಗಿಸಲು, ಕಾಲೇಜಿನಲ್ಲಿ ಕಳಪೆ ಪ್ರದರ್ಶನ ನೀಡಲು ಹಾಗೂ ಹಲವು ಪರೀಕ್ಷೆಗಳಲ್ಲಿ ಫೇಲ್ ಆಗಲು ಕಾರಣವಾಗುತ್ತದೆ.
ಕಾಲೇಜಿನಲ್ಲಿದ್ದಾಗ ನಾಯಕಿ ಆತನನ್ನು ಆಳವಾಗಿ ಪ್ರೀತಿಸುತ್ತಾಳೆ. ಕಾಲೇಜು ನಂತರ, ನಾಯಕ ಕೆಲಸಕ್ಕೆ ಹೋಗುವಂತೆ ನಟಿಸುವ ಮೂಲಕ ತನ್ನ ಹೆತ್ತವರನ್ನು ಮೋಸಗೊಳಿಸುತ್ತಾನೆ.
ಆದರೆ ಕೊನೆಗೂ ನಾಯಕಿ ಆತನಿಗಿಂತ ಹೆಚ್ಚು ಪಟ್ಟು ಸಂಬಳ ತರುವ ಇನ್ನೊಬ್ಬ ವ್ಯಕ್ತಿಯನ್ನು ಮದುವೆಯಾಗಲು ಬಯಸುತ್ತಾಳೆ. ಇದರಿಂದ ನಿರಾಶೆಗೊಂಡ ನಾಯಕ ಆ ವ್ಯಕ್ತಿಗಿಂತ ಹೆಚ್ಚು ಸಂಬಳ ಗಳಿಸಲು ನಕಲಿ ಪ್ರಮಾಣಪತ್ರವನ್ನು ತಯಾರಿಸಿ ಕೆಲಸ ಗಿಟ್ಟಿಸಿಕೊಳ್ಳುತ್ತಾನೆ. ಈ ಸುಳ್ಳು ಅವನ ಜೀವನ ಬದಲಾಯಿಸುತ್ತದೆ.
ಅಂತಿಮವಾಗಿ ನಾಯಕಿಯ ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳುತ್ತಾನೆ. ಮುಂದೊಂದು ದಿನ ಅನಿರೀಕ್ಷಿತವಾಗಿ ಕಾಲೇಜು ಪ್ರಾಂಶುಪಾಲರನ್ನ ನಾಯಕ ಆತನ ಕಂಪನಿಯಲ್ಲಿ ಭೇಟಿ ಮಾಡುತ್ತಾನೆ.
ಇಲ್ಲಿಂದ ಮುಂದೆ ನಾಯಕ ಎಲ್ಲ ಸಬ್ಜೆಕ್ಟ್ ಗಳನ್ನ ಪಾಸ್ ಮಾಡಿದ್ದಾನಾ? ಅವನಿಗೆ ಕೆಲಸ ಮರಳಿ ಸಿಕ್ಕಿದೆಯೇ? ನಾಯಕಿ ಜೊತೆ ಮದುವೆ ನಡೆದಿದೆಯೇ? ಎಂಬುದೆಲ್ಲ ಡ್ರ್ಯಾಗನ್ ಕಥೆಯ ಉಳಿದ ಭಾಗ.
ವಿಭಿನ್ನ ಕಥಾಹಂದರದೊಂದಿಗೆ ತೆರೆಗೆ ಬಂದ ಡ್ರ್ಯಾಗನ್ ಮೊದಲ ದಿನ ವಿಶ್ವದಾದ್ಯಂತ 11.2 ಕೋಟಿ ರೂ ಗಳಿಸಿದೆ. ಎರಡನೇ ದಿನ ವಿಶ್ವಾದ್ಯಂತ 15.4 ಕೋಟಿ ಗಳಿಸಿದೆ. ತಮಿಳುನಾಡಿನಲ್ಲಿ ಮಾತ್ರ 10.25 ಕೋಟಿ ಗಳಿಸಿದೆ. ಒಟ್ಟಾರೆ ₹26.6 ಕೋಟಿ ಗಳಿಸಿದ್ದು, ವಾರಾಂತ್ಯದಲ್ಲಿ ಚಿತ್ರದ ಕಲೆಕ್ಷನ್ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.