ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಶ್ವರ್ಯಾ ನಿರ್ದೇಶನದ ‘ಲಾಲ್ ಸಲಾಂ’ ಸಿನಿಮಾ ಫೆ. 9 ಶುಕ್ರವಾರ ಬಿಡುಗಡೆಯಾಗಿದೆ. ರಜನಿಕಾಂತ್ ಅಭಿಮಾನಿಗಳು ಈ ಚಿತ್ರಕ್ಕಾಗಿ ಕಾತರದಿಂದ ಕಾಯುತ್ತಿದ್ದರು. ವಿಷ್ಣು ವಿಶಾಲ್ ಮತ್ತು ವಿಕ್ರಾಂತ್ ಅಭಿನಯದ ಈ ಚಿತ್ರದಲ್ಲಿ ರಜನಿಕಾಂತ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಲಾಲ್ ಸಲಾಂ ಚಿತ್ರದ ಮೂಲಕ ಒಂಬತ್ತು ವರ್ಷಗಳ ನಂತರ ಐಶ್ವರ್ಯಾ ರಜನಿಕಾಂತ್ ಮತ್ತೆ ನಿರ್ದೇಶನಕ್ಕೆ ಮರಳಿದ್ದಾರೆ. ಜೈಲರ್ ನಂತರ ರಜನಿಕಾಂತ್ ಲಾಲ್ ಸಲಾಂ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಟ್ರೇಲರ್ ಬಿಡುಗಡೆಯಾದಾಗಿನಿಂದಲೂ ಚಿತ್ರ ಸಾಕಷ್ಟು ಸುದ್ದಿಯಲ್ಲಿದೆ. ಹಾಗಾಗಿ ಈ ಚಿತ್ರದ ಬಗ್ಗೆ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿತ್ತು. ಈಗ ಮೊದಲ ದಿನದ ಕಲೆಕ್ಷನ್ ಬಗ್ಗೆ ಮಾಹಿತಿ ಸಿಕ್ಕಿದೆ.
ಲಾಲ್ ಸಲಾಂ ಚಿತ್ರ ನಿನ್ನೆ ಒಂದೇ ದಿನದಲ್ಲಿ 4.3 ಕೋಟಿ ರೂ. ಗಳಿಸಿದೆ. ಹಾಗೆ ನೋಡಿದರೆ ಲಾಲ್ ಸಲಾಂ ಚಿತ್ರವು ಜೈಲರ್ ನ ಓಪನಿಂಗ್ ಕಲೆಕ್ಷನ್ ಗಿಂತಲೂ ಬೋರ್ ಎನಿಸುತ್ತದೆ. ಜೈಲರ್ ಮೊದಲ ದಿನ 48.35 ಕೋಟಿ ಗಳಿಸಿತ್ತು.