March 22, 2026
Sunday, March 22, 2026
spot_img

CINE | ‘ಹಯಗ್ರೀವ’ ಬಿಡುಗಡೆಗೆ ತಡ: ಸೆನ್ಸಾರ್ ಗೊಂದಲದಿಂದ ಮೊದಲ ಶೋಗಳು ರದ್ದು

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟ ಧನ್ವೀರ್ ಗೌಡ ಅಭಿನಯದ ‘ಹಯಗ್ರೀವ’ ಸಿನಿಮಾ ಫೆಬ್ರವರಿ 27ರಂದು ರಾಜ್ಯಾದ್ಯಂತ ಬಿಡುಗಡೆಯಾಗಬೇಕಿತ್ತು. ಚಿತ್ರದ ಪ್ರಚಾರ ಭಾರೀ ಮಟ್ಟದಲ್ಲಿ ನಡೆದಿದ್ದು, ನಟ ದರ್ಶನ್ ಸಹ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡು ಶುಭಾಶಯ ಕೋರಿದ್ದರು. ಆದರೆ ಬಿಡುಗಡೆ ದಿನವೇ ಚಿತ್ರಕ್ಕೆ ಅಡಚಣೆ ಎದುರಾಗಿದೆ.

ಸೆನ್ಸಾರ್ ಸಂಬಂಧಿತ ಸಮಸ್ಯೆಯ ಹಿನ್ನೆಲೆಯಲ್ಲಿ ಬೆಳಿಗ್ಗೆ 10:30 ಮತ್ತು ಮಧ್ಯಾಹ್ನ 1:30ಕ್ಕೆ ನಿಗದಿಯಾಗಿದ್ದ ಮೊದಲ ಎರಡು ಪ್ರದರ್ಶನಗಳು ರದ್ದಾಗಿವೆ. ಈ ಬಗ್ಗೆ ಚಿತ್ರತಂಡ ಪ್ರಕಟಣೆ ನೀಡಿ, ಅನಿವಾರ್ಯ ಕಾರಣಗಳಿಂದ ಆರಂಭಿಕ ಶೋಗಳು ನಡೆಯಲಿಲ್ಲ, ಆದರೆ ಸಂಜೆ 4:30ರಿಂದ ಪ್ರದರ್ಶನ ಆರಂಭವಾಗಲಿದೆ ಎಂದು ತಿಳಿಸಿದೆ.

ಇದನ್ನೂ ಓದಿ:

ಚಿತ್ರದಲ್ಲಿ ಹಿಂದೂ ದೇವತೆಗಳ ಉಲ್ಲೇಖ ಹಾಗೂ ಕೆಲವು ದೃಶ್ಯಗಳಲ್ಲಿ ದೇವರ ಚಿತ್ರಣದ ಬಗ್ಗೆ ಆಕ್ಷೇಪ ವ್ಯಕ್ತವಾಗಿರುವುದರಿಂದ ಸೆನ್ಸಾರ್ ಮಂಡಳಿ ಚಿತ್ರವನ್ನು ರಿವೈಸ್ ಕಮಿಟಿಗೆ ಕಳುಹಿಸಿದೆ ಎನ್ನಲಾಗಿದೆ. ಕಮಿಟಿ ಪರಿಶೀಲನೆ ಪೂರ್ಣಗೊಳಿಸಿದ ಬಳಿಕವೇ ಪ್ರಮಾಣಪತ್ರ ನೀಡಲಾಗುತ್ತದೆ.

ನಿಯಮಾನುಸಾರ ರಿವೈಸ್ ಸಮಿತಿಗೆ ನಿರ್ಧಾರಕ್ಕೆ 15 ದಿನಗಳವರೆಗೆ ಅವಕಾಶವಿದೆ. ಆದರೂ ಚಿತ್ರತಂಡ ಇಂದೇ ಅನುಮತಿ ಸಿಗುವ ನಿರೀಕ್ಷೆಯಲ್ಲಿದೆ.

‘ಹಯಗ್ರೀವ’ ಚಿತ್ರವನ್ನು ರಘು ಕುಮಾರ್ ನಿರ್ದೇಶಿಸಿದ್ದು, ಸಂಜನಾ ಆನಂದ್ ಪ್ರಮುಖ ಪಾತ್ರದಲ್ಲಿದ್ದಾರೆ. ಶರತ್ ಲೋಹಿತಾಶ್ವ, ಸಾಧುಕೋಕಿಲ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !