ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಾಲಿವುಡ್ನ ಮೋಸ್ಟ್ ಫೇಮಸ್ ಆಕ್ಷನ್ ಸಿನಿಮಾ ಸರಣಿಗಳಲ್ಲಿ ‘ದಿ ಕರಾಟೆ ಕಿಡ್’ ಸಹ ಒಂದು. ಈ ವರೆಗೆ ಬರೋಬ್ಬರಿ ಐದು ಸರಣಿಯ ‘ದಿ ಕರಾಟೆ ಕಿಡ್’ ಸಿನಿಮಾಗಳು ಬಂದಿವೆ. ಅದರಲ್ಲಿ ಬಹಳ ಜನಪ್ರಿಯವಾಗಿದ್ದು 2010 ರಲ್ಲಿ ಬಂದ ಜಾಕಿ ಚಾನ್ ನಟನೆಯ ‘ದಿ ಕರಾಟೆ ಕಿಡ್’ ಇದೀಗ ಮತ್ತೊಮ್ಮೆ ‘ದಿ ಕರಾಟೆ ಕಿಡ್’ ಬರುತ್ತಿದೆ.
ಹೊಸ ‘ದಿ ಕರಾಟೆ ಕಿಡ್’ ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು, ಸಿನಿಮಾದ ಟ್ರೈಲರ್ ಇದೀಗ ಬಿಡುಗಡೆ ಆಗಿದೆ. ಈ ಸಿನಿಮಾದಲ್ಲಿಯೂ ಜಾಕಿ ಚಾನ್ ಗುರುವಿನ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಸಿನಿಮಾಕ್ಕೆ ‘ದಿ ಕರಾಟೆ ಕಿಡ್: ಲೆಜೆಂಡ್ಸ್’ ಎಂದು ಹೆಸರಿಡಲಾಗಿದೆ. ರಾಲ್ಫ್ ಮಾಹಿನೊ ಸಹ ಈ ಸಿನಿಮಾದಲ್ಲಿ ಜಾಕಿ ಚಾನ್ ಜೊತೆಗೆ ಗುರುವಿನ ಪಾತ್ರದಲ್ಲಿ ನಟಿಸಿದ್ದಾರೆ.