ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೇಟೆಯಾಡಿದ ಕಾಡು ಮೊಲಗಳೊಂದಿಗೆ ಸಾರ್ವಜನಿಕವಾಗಿ ಮೆರವಣಿಗೆ ನಡೆಸುತ್ತಿರುವ ವೀಡಿಯೊಗಳು ಕಾಣಿಸಿಕೊಂಡ ನಂತರ ಕಾಂಗ್ರೆಸ್ ಶಾಸಕ ಬಸನಗೌಡ ತುರುವಿಹಾಳ್ ಅವರ ಪುತ್ರ ಸತೀಶ್ ಗೌಡ, ಅವರ ಸಹೋದರ ಸೇರಿದಂತೆ ಹಲವರ ರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಯುಗಾದಿ ಹಬ್ಬ ಹಿನ್ನೆಲೆಯಲ್ಲಿ ಮಸ್ಕಿ ಕಾಂಗ್ರೆಸ್ ಶಾಸಕ ಆರ್.ಬಸನಗೌಡ ತುರ್ವಿಹಾಳ ಪುತ್ರ ಮತ್ತು ಸಹೋದರ ಕಾಡುಪ್ರಾಣಿಗಳನ್ನು ಬೇಟೆಯಾಡಿ ಮೆರವಣಿಗೆ ಮಾಡಿರುವ ವಿಡಿಯೋ ವೈರಲ್ ಆಗಿದೆ. ಈ ಮೂಲಕ ಶಾಸಕರ ಪುತ್ರ ಸತೀಶ್ಗೌಡ, ಸಹೋದರ ಸಿದ್ದನಗೌಡ ವನ್ಯಜೀವಿ ಸಂರಕ್ಷಣಾ ಕಾಯ್ದೆಯನ್ನು ಉಲ್ಲಂಘಿಸಿದ್ದಾರೆ.
ಶಾಸಕರ ಪುತ್ರ, ಸಹೋದರನ ನೇತೃತ್ವದಲ್ಲಿ ಮೊಲಗಳನ್ನು ಬೇಟೆಯಾಡಲಾಗಿದೆ. ಬಳಿಕ, ಮೊಲಗಳ ಕಳೆಬರಹವನ್ನು ಕಟ್ಟಿಗೆಗಳಿಗೆ ಕಟ್ಟಿ ಸಿಂಧನೂರು ತಾಲೂಕಿನ ತುರ್ವಿಹಾಳ ಪಟ್ಟಣದಲ್ಲಿ ಮೆರವಣಿಗೆ ಮಾಡಲಾಗಿದೆ. ಅಲ್ಲದೇ, ಖಡ್ಗ ಮತ್ತು ಕೊಡಲಿ ಪ್ರದರ್ಶನ ಮಾಡಲಾಗಿದೆ.
ಘಟನೆ ಸಂಬಂಧ ಮಸ್ಕಿ ಕಾಂಗ್ರೆಸ್ ಶಾಸಕ ಬನಸಗೌಡ ತುರ್ವಿಹಾಳ ಅವರ ಪುತ್ರ ಸತೀಶ್ ಗೌಡ ಹಾಗೂ ಸಹೋದರ ಸಿದ್ದನಗೌಡ ಹಾಗೂ ದುರ್ಗೇಶ್ ಸೇರಿ ಹಲವರ ವಿರುದ್ಧ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿಕೊಂಡಿದೆ.