CINE | OTTಗೆ ಬರ್ತಿದೆ ಥ್ರಿಲ್ಲರ್ ಸಿನಿಮಾ ‘ಒಡೆಲಾ2’ : ಯಾವುದ್ರಲ್ಲಿ, ಯಾವಾಗ ಸ್ಟ್ರೀಮಿಂಗ್‌? ಇಲ್ಲಿದೆ ಡೀಟೇಲ್ಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇತ್ತೀಚಿಗೆ ಹಿಟ್ ಚಿತ್ರಗಳ ಸೀಕ್ವೆಲ್ ಗಳು ಸಾಮಾನ್ಯವಾಗಿದೆ. ಇದೆ ಸಾಲಿಗೆ ‘ಒಡೆಲಾ ರೈಲ್ವೇ ಸ್ಟೇಷನ್’ ಸೇರಿದ್ದು ಇದರ ಮುಂದುವರಿದ ಭಾಗ ‘ಒಡೆಲಾ 2’ ಏಪ್ರಿಲ್ 17 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಆದರೆ ಈ ಈ ಚಿತ್ರ ಶೀಘ್ರದಲ್ಲೇ OTT ಗೆ ಬರಲಿದೆಯಂತೆ.

ಈ ಚಿತ್ರದ ಡಿಜಿಟಲ್ ಸ್ಟ್ರೀಮಿಂಗ್ ಹಕ್ಕುಗಳನ್ನು ಜನಪ್ರಿಯ OTT ಕಂಪನಿ ಅಮೆಜಾನ್ ಪ್ರೈಮ್ ವಿಡಿಯೋ ಪಡೆದುಕೊಂಡಿದ್ದು, ಮೇ 16 ರಿಂದ ಅದನ್ನು ಸ್ಟ್ರೀಮಿಂಗ್‌ಗೆ ತರಲು ಯೋಜಿಸುತ್ತಿದೆ. ಶೀಘ್ರದಲ್ಲೇ ಅಧಿಕೃತ ಘೋಷಣೆ ಮಾಡಲಾಗುವುದು ಎಂದು ಹೇಳಲಾಗುತ್ತಿದೆ.

ಕಥೆ ಏನು: ಒಡೆಲಾ ಎಂಬ ಹಳ್ಳಿಯಲ್ಲಿ ಹುಡುಗಿಯರ ಮೇಲೆ ದಾಳಿ ಮಾಡಿ ಕೊಲ್ಲುವ ಸೈಕೋ ‘ತಿರುಪತಿ’ (ವಶಿಷ್ಠ ಎನ್. ಸಿಂಹ) ಗೆ ಅವನ ಹೆಂಡತಿ (ಹೆಬ್ಬಾ ಪಟೇಲ್) ಶಿಕ್ಷೆ ವಿಧಿಸುತ್ತಾಳೆ.

ಗ್ರಾಮಸ್ಥರು ತಿರುಪತಿಯನ್ನು ಸಮಾಧಿಯಲ್ಲಿ ಹೂತು ವಿಶೇಷ ರೀತಿಯಲ್ಲಿ ಶಿಕ್ಷಿಸುತ್ತಾರೆ. ಆದರೆ ಅನಿರೀಕ್ಷಿತವಾಗಿ, ತಿರುಪತಿಯ ಆತ್ಮವು ಹಳ್ಳಿಯನ್ನು ಕಾಡಲು ಮರಳುತ್ತದೆ. ಇದನ್ನೆಲ್ಲ ತಡೆಯಲು ನಾಗಾ ಸಾಧು ಭೈರವಿ (ತಮನ್ನಾ) ಹೆಜ್ಜೆ ಹಾಕುತ್ತಾರೆ. ತಿರುಪತಿ ಆತ್ಮವನ್ನು ಸಮಾಧಾನಪಡಿಸಿ ಹಳ್ಳಿಯನ್ನು ಉಳಿಸೋಕಾಗುತ್ತಾ ಎಂಬುದು ಚಿತ್ರದ ಮುಖ್ಯ ವಿಷಯ.

ದೈವಿಕ  ಶಕ್ತಿಗಳು ಮತ್ತು ದುಷ್ಟ ಶಕ್ತಿಗಳ ನಡುವಿನ ಹೋರಾಟವನ್ನು ಆಧರಿಸಿದ ಈ ಚಿತ್ರವನ್ನು ಸಂಪತ್ ನಂದಿ ಮತ್ತು ಅಶೋಕ್ ತೇಜ ಅವರು ಸೃಜನಶೀಲವಾಗಿ ನಿರ್ದೇಶಿಸಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!