ಹೊಸದಿಗಂತ ಡಿಜಿಟಲ್ ಡೆಸ್ಕ್:
“ನಮ್ಮ ಪ್ರೀತಿಯ ಹೀರೋ ಧನ್ವೀರ್ ಗೌಡ ‘ವಾಮನ’ನಾಗಿ ಏಪ್ರಿಲ್ 10ರಿಂದ ನಿಮ್ಮ ಮುಂದೆ ಬರಲು ಸಜ್ಜಾಗಿದ್ದಾರೆ. ಚಿತ್ರದ ಟ್ರೇಲರ್ ಸೊಗಸಾಗಿ ಮೂಡಿಬಂದಿದ್ದು ಜನಮೆಚ್ಚುಗೆ ಗಳಿಸುವಲ್ಲಿ ನಂಬಿಕೆ ಹೆಚ್ಚಾಗಿದೆ. ಕನ್ನಡ ಸಿನಿಪ್ರೇಮಿಗಳ ಪ್ರೋತ್ಸಾಹ ಮತ್ತು ಬೆಂಬಲದಿಂದ ಈ ಚಿತ್ರವು ಎಲ್ಲೆಡೆ ಯಶಸ್ವಿಯಾಗಿ ಅಬ್ಬರಿಸಲಿ ಎಂದು ಆಶಿಸುತ್ತೇನೆ” ಎಂದು ನಟ ದರ್ಶನ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
‘ನನಗೆ ಈ ಸಿನಿಮಾದಲ್ಲಿ ಮುದ್ದು ರಾಕ್ಷಸಿ ಸಾಂಗ್ ಇಷ್ಟ. ಎಲ್ಲಿಂದ ಹುಡುಕಿದ್ದೀರಿ, ತುಂಬ ಚೆನ್ನಾಗಿದೆ ಅಂತ ನಾನು ಯಾವಾಗಲೂ ಹೇಳುತ್ತಿರುತ್ತೇನೆ. ಮನೆಯಲ್ಲಿ ನನ್ನ ಹೆಂಡತಿ ಕೋಪ ಮಾಡಿಕೊಂಡರೆ ನಾನು ಕೂಡ ರೇಗಿಸುತ್ತೇನೆ. ಮುದ್ದು ರಾಕ್ಷಸಿ ಥರ ಇದ್ದೀಯ ಅಂತ ಹೇಳುತ್ತೇನೆ. ಇದು ಒಳ್ಳೆಯ ಮನರಂಜನೆ ಇರುವ ಸಿನಿಮಾ’ ಎಂದು ದರ್ಶನ್ ಹೇಳಿದ್ದಾರೆ.
ನಮ್ಮ ಪ್ರೀತಿಯ ಹೀರೋ ಧನ್ವೀರ್ ಗೌಡ ‘ವಾಮನ’ನಾಗಿ ಏಪ್ರಿಲ್ ೧೦ ರಿಂದ ನಿಮ್ಮ ಮುಂದೆ ಬರಲು ಸಜ್ಜಾಗಿದ್ದಾರೆ. ಚಿತ್ರದ ಟ್ರೈಲರ್ ಸೊಗಸಾಗಿ ಮೂಡಿಬಂದಿದ್ದು ಜನಮೆಚ್ಚುಗೆ ಗಳಿಸುವಲ್ಲಿ ನಂಬಿಕೆ ಹೆಚ್ಚಾಗಿದೆ. ಕನ್ನಡ ಸಿನಿಪ್ರೇಮಿಗಳ ಪ್ರೋತ್ಸಾಹ ಮತ್ತು ಬೆಂಬಲದಿಂದ ಈ ಚಿತ್ರವು ಎಲ್ಲೆಡೆ ಯಶಸ್ವಿಯಾಗಿ ಅಬ್ಬರಿಸಲಿ ಎಂದು ಆಶಿಸುತ್ತೇನೆ. ಒಳ್ಳೆ ಕನ್ನಡ… pic.twitter.com/7Tr0Kd429x
— Darshan Thoogudeepa (@dasadarshan) March 27, 2025