ಹೊಸದಿಗಂತ ಡಿಜಿಟಲ್ ಡೆಸ್ಕ್:
2026ರ ಆರಂಭದಲ್ಲಿ ತಮಿಳು ಚಿತ್ರರಂಗದಲ್ಲಿ ಗಮನ ಸೆಳೆದ ಚಿತ್ರಗಳಲ್ಲಿ ಒಂದಾದ ‘ಪರಾಶಕ್ತಿ’ ಇದೀಗ ಡಿಜಿಟಲ್ ವೇದಿಕೆಗೆ ಕಾಲಿಡಲು ಸಿದ್ಧವಾಗಿದೆ. ಚಿತ್ರಮಂದಿರಗಳಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದ ಈ ಸಿನಿಮಾ ಶೀಘ್ರದಲ್ಲೇ ಒಟಿಟಿ ಪ್ರೇಕ್ಷಕರನ್ನು ರಂಜಿಸಲು ಬರುತ್ತಿದೆ.
ಈ ಚಿತ್ರದ ಒಟಿಟಿ ಹಕ್ಕುಗಳನ್ನು ಜೀ5 ಪಡೆದುಕೊಂಡಿದ್ದು, ಫೆಬ್ರವರಿ 7ರಿಂದ ಅದೇ ವೇದಿಕೆಯಲ್ಲಿ ಪ್ರೀಮಿಯರ್ ಆಗಲಿದೆ. ಒಟಿಟಿಪ್ಲೇ ಪ್ರೀಮಿಯಂ ಬಳಕೆದಾರರು ಕೂಡಾ ಅದೇ ದಿನದಿಂದ ಸಿನಿಮಾ ವೀಕ್ಷಿಸಲು ಅವಕಾಶ ಪಡೆಯಲಿದ್ದಾರೆ.
ಸುಧಾ ಕೊಂಗರಾ ನಿರ್ದೇಶನದ ಈ ಚಿತ್ರ ತನ್ನ ಕಥಾಹಂದರ ಮತ್ತು ಅಭಿನಯದ ಮೂಲಕ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.
ಇದನ್ನೂ ಓದಿ:
ಬಾಕ್ಸ್ ಆಫೀಸ್‌ನಲ್ಲಿ ‘ಪರಾಶಕ್ತಿ’ ವಿಶ್ವದಾದ್ಯಂತ ಸುಮಾರು 85 ಕೋಟಿ ರೂಪಾಯಿ ಸಂಗ್ರಹಿಸಿ ಯಶಸ್ಸು ಕಂಡಿದೆ. ಭಾರತದಲ್ಲಿ 62 ಕೋಟಿ ಮತ್ತು ವಿದೇಶಗಳಲ್ಲಿ 23 ಕೋಟಿ ಗಳಿಕೆ ಮಾಡಿರುವ ಈ ಸಿನಿಮಾ 2026ರ ಪ್ರಮುಖ ಹಿಟ್ ಚಿತ್ರಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ.
ಶಿವಕಾರ್ತಿಕೇಯನ್ ತಮ್ಮ ಗಂಭೀರ ಪಾತ್ರದ ಮೂಲಕ ಮೆಚ್ಚುಗೆ ಪಡೆದಿದ್ದಾರೆ. ರವಿ ಮೋಹನ್ ಖಳನಾಯಕನಾಗಿ ಮಿಂಚಿದರೆ, ಅಥರ್ವಾ, ಶ್ರೀಲೀಲಾ, ರಾಣಾ ದಗ್ಗುಬಾಟಿ, ಬೆಸಿಲ್ ಜೋಸೆಫ್ ಹಾಗೂ ಡಾಲಿ ಧನಂಜಯ್ ವಿಶೇಷ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.



