September 13, 2026
Sunday, September 13, 2026
spot_img

ವಿಕೆಟ್ ಉಳಿಸಿಕೊಂಡಿದ್ರೆ ಎಲ್ಲ ಚೇಂಜ್ ಆಗ್ತಿತ್ತು: ಸೋಲಿನ ಬಳಿಕ ಮನಬಿಚ್ಚಿ ಮಾತಾಡಿದ ಡೆಲ್ಲಿ ಕ್ಯಾಪ್ಟನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗುಜರಾತ್ ಟೈಟಾನ್ಸ್ ವಿರುದ್ಧ ಕೇವಲ ಒಂದು ರನ್ ಅಂತರದಲ್ಲಿ ಸೋಲು ಕಂಡ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ಶಿಬಿರದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಗೆಲುವಿನ ಅಂಚಿನವರೆಗೆ ಹೋಗಿ ಪಂದ್ಯ ಕೈಚೆಲ್ಲಿದ ನೋವಿನ ನಡುವೆಯೂ ತಂಡದ ನಾಯಕ ಅಕ್ಷರ್ ಪಟೇಲ್ ಧೈರ್ಯದ ಮಾತುಗಳನ್ನಾಡಿದ್ದು ಅಭಿಮಾನಿಗಳ ಗಮನ ಸೆಳೆದಿದೆ.

ಪಂದ್ಯದ ನಂತರ ಮಾತನಾಡಿದ ಅಕ್ಷರ್, ಎರಡೂ ತಂಡಗಳು ಅತ್ಯುತ್ತಮ ಕ್ರಿಕೆಟ್ ಆಡಿವೆ. ಇಂತಹ ರೋಚಕ ಪಂದ್ಯಗಳಲ್ಲಿ ಒಂದೇ ಕಾರಣವನ್ನು ತೋರಿಸಿ ಸೋಲನ್ನು ವಿವರಿಸಲು ಸಾಧ್ಯವಿಲ್ಲ. ಆದರೆ ನಮ್ಮ ತಂಡದ ಒಟ್ಟಾರೆ ಪ್ರದರ್ಶನ ತೃಪ್ತಿಕರವಾಗಿತ್ತು ಎಂದು ಹೇಳಿದರು.

ಇದನ್ನೂ ಓದಿ:

211 ರನ್‌ಗಳ ಗುರಿ ಬೆನ್ನಟ್ಟಿದ ವೇಳೆ ನಿರ್ಣಾಯಕ ಕ್ಷಣಗಳಲ್ಲಿ ವಿಕೆಟ್‌ಗಳು ಕುಸಿದದ್ದು ಪಂದ್ಯ ತಿರುವು ಪಡೆದ ಪ್ರಮುಖ ಕಾರಣ ಎಂದು ಅವರು ಅಭಿಪ್ರಾಯಪಟ್ಟರು. ಆ ಸಮಯದಲ್ಲಿ ನಾವು ಇನ್ನೂ ಜಾಣತನದಿಂದ ಆಡಬೇಕಿತ್ತು. ವಿಕೆಟ್‌ಗಳನ್ನು ಉಳಿಸಿಕೊಂಡಿದ್ದರೆ ಫಲಿತಾಂಶ ಬೇರೆ ಆಗಬಹುದಿತ್ತು ಎಂದರು.

ಕೆ.ಎಲ್. ರಾಹುಲ್ ಅವರ 92 ರನ್‌ಗಳ ಅದ್ಭುತ ಇನ್ನಿಂಗ್ಸ್‌ಗೆ ಅಕ್ಷರ್ ಮೆಚ್ಚುಗೆ ಸೂಚಿಸಿದರು. ಒತ್ತಡದ ನಡುವೆಯೂ ರಾಹುಲ್ ಅದ್ಭುತವಾಗಿ ಆಡಿದರು. ಅವರ ಬ್ಯಾಟಿಂಗ್ ತಂಡಕ್ಕೆ ದೊಡ್ಡ ಬಲ ನೀಡಿತು ಎಂದು ಹೇಳಿದರು.

ಆದರೂ ತಂಡವು ಉತ್ತಮ ಲಯದಲ್ಲಿದೆ ಎಂದು ಹೇಳಿದ ಅಕ್ಷರ್, ಮುಂದಿನ ಪಂದ್ಯದಲ್ಲಿ ಚೆನ್ನೈ ವಿರುದ್ಧ ಗೆಲುವಿನೊಂದಿಗೆ ಮರಳುವ ಭರವಸೆ ನೀಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !