May 26, 2026
Tuesday, May 26, 2026
spot_img

CINE | ‘ರಾಜ ಶಿವಾಜಿ’ ಚಿತ್ರದಲ್ಲಿ ಸಲ್ಲು ಸರ್ಪ್ರೈಸ್ ಎಂಟ್ರಿ: ಅಭಿಮಾನಿಗಳು ಫುಲ್ ಖುಷ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಡುಗಡೆಯಾದ ಮೊದಲ ದಿನದಿಂದಲೇ ‘ರಾಜ ಶಿವಾಜಿ’ ಸಿನಿಮಾ ಸಿನಿಪ್ರಿಯರ ಗಮನ ಸೆಳೆಯುತ್ತಿದ್ದು, ಅದಕ್ಕೆ ಪ್ರಮುಖ ಕಾರಣಗಳಲ್ಲಿ ಒಂದಾಗಿ ಸಲ್ಮಾನ್ ಖಾನ್ ಅವರ ವಿಶೇಷ ಪಾತ್ರ ಹೊರಹೊಮ್ಮಿದೆ. ಯಾವುದೇ ಮುನ್ನೋಟವಿಲ್ಲದೆ ತೆರೆ ಮೇಲೆ ಕಾಣಿಸಿಕೊಂಡ ನಟನ ಎಂಟ್ರಿ ಪ್ರೇಕ್ಷಕರಲ್ಲಿ ಭಾರೀ ಉತ್ಸಾಹ ಮೂಡಿಸಿದೆ.

ಕೇಸರಿ ಪೇಟ, ಸಾಂಪ್ರದಾಯಿಕ ಉಡುಪು ಮತ್ತು ಕೈಯಲ್ಲಿ ಖಡ್ಗ ಹಿಡಿದ ಸಲ್ಮಾನ್, ವೀರ ಯೋಧನ ಪಾತ್ರದಲ್ಲಿ ಮಿಂಚಿದ್ದಾರೆ. ಅವರ ಈ ಪಾತ್ರ ಸಿನಿಮಾದ ಪ್ರಮುಖ ಆಕರ್ಷಣೆಯಾಗಿ ಮೂಡಿಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಹಾಗೂ ವಿಡಿಯೋಗಳು ಸಖತ್ ವೈರಲ್ ಆಗುತ್ತಿವೆ.

ಇದನ್ನೂ ಓದಿ:

ಈ ವಿಶೇಷ ಪಾತ್ರ ಸಿನಿಮಾದ ಆರಂಭಿಕ ಯೋಜನೆಯಲ್ಲಿ ಇರಲಿಲ್ಲ ಎನ್ನಲಾಗಿದೆ. ಚಿತ್ರದ ಬಗ್ಗೆ ನಡೆದ ಮಾತುಕತೆಯ ವೇಳೆ ಸಲ್ಮಾನ್ ಸ್ವತಃ ಈ ಸಿನಿಮಾದ ಭಾಗವಾಗಬೇಕು ಎಂದು ಆಸಕ್ತಿ ತೋರಿದ್ದರಿಂದ, ಅವರಿಗಾಗಿ ವಿಶೇಷ ಪಾತ್ರವನ್ನು ರೂಪಿಸಲಾಗಿದೆ ಎಂದು ಚಿತ್ರತಂಡ ಹೇಳಿದೆ.

ರಿತೇಶ್ ದೇಶ್ಮುಖ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾ, ಶಿವಾಜಿ ಮಹಾರಾಜರ ಜೀವನ ಹೋರಾಟ ಮತ್ತು ಸ್ವರಾಜ್ಯದ ಕನಸಿನ ಕಥೆಯನ್ನು ತೆರೆಗೆ ತಂದಿದೆ. ಹಲವು ಖ್ಯಾತ ಕಲಾವಿದರ ಅಭಿನಯದಿಂದ ಸಿನಿಮಾ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !