CINE | ಅಮೀರ್ ಖಾನ್​ ಪುತ್ರನ ಜೊತೆ ಸಾಯಿ ಪಲ್ಲವಿ ಸಕತ್ ಡ್ಯಾನ್ಸ್, ವಿಡಿಯೋ ನೋಡಿ ಫ್ಯಾನ್ಸ್ ಶಾಕ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟಿ ಸಾಯಿ ಪಲ್ಲವಿ ಜಪಾನ್‌ನ ಪಬ್‌ನಲ್ಲಿ ಅಮೀರ್ ಖಾನ್ ಅವರ ಮಗ ಜುನೈದ್ ಖಾನ್ ಅವರೊಂದಿಗೆ ಸಕತ್ ಡ್ಯಾನ್ಸ್ ಮಾಡಿದ್ದಾರೆ. ಇದೀಗ ಈ ವಿಡಿಯೋ ವೈರಲ್ ಆಗಿದೆ. ಅಮೀರ್ ಮಗನೊಂದಿಗೆ ಸಾಯಿ ಪಲ್ಲವಿ ಏನು ಮಾಡುತ್ತಿದ್ದಾರೆ? ಎಂದು ಅಭಿಮಾನಿಗಳು ಶಾಕ್ ಆಗಿದ್ದಾರೆ. ಆದರೆ ನಿಜವಾದ ಕಾರಣ ಬೇರೆಯೇ ಇದೆ.

ಇನ್ನೂ ಹೆಸರಿಡದ ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಂಡಿರುವ ನಟಿ, ಈ ಚಿತ್ರದ ಚಿತ್ರೀಕರಣ ಜಪಾನ್‌ನಲ್ಲಿ ಭರದಿಂದ ಸಾಗುತ್ತಿದೆ. ಈ ಚಿತ್ರದಲ್ಲಿ ಜುನೈದ್ ಜೊತೆ ಸಾಯಿ ಪಲ್ಲವಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದರೊಂದಿಗೆ ಸಾಯಿ ಪಲ್ಲವಿ ಬಾಲಿವುಡ್ ಪ್ರವೇಶಿಸುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.

ಮೂಲಗಳ ಪ್ರಕಾರ, ಜುನೈದ್ ಖಾನ್ ಈ ಚಿತ್ರವನ್ನು ಅಮೀರ್ ಖಾನ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ್ದಾರೆ. ಹೆಸರಿಡದ ಈ ಚಿತ್ರದ 50 ದಿನಗಳ ಶೂಟಿಂಗ್ ಶೆಡ್ಯೂಲ್ ಮುಗಿಸಿ ಜಪಾನ್ ನಿಂದ ವಾಪಸಾಗಿದ್ದಾರೆ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!