CINE | ಅಭಿಮಾನಿಗಳೇ ದೇವ್ರು: ಕಾರ್‌ನ ಸನ್‌ರೂಫ್‌ ಓಪನ್ ಮಾಡಿ ಫ್ಯಾನ್ಸ್ ಗೆ ಕೈಬೀಸಿದ ಸೂಪರ್ ಸ್ಟಾರ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಜೈಲರ್-2 ಚಿತ್ರದ ಶೂಟಿಂಗ್ ಕೇರಳದ ಅಟ್ಟಪ್ಪಾಡಿಯಲ್ಲಿ ಭರ್ಜರಿಯಾಗಿ ನಡೆಯುತ್ತಿದೆ.

ಸೂಪರ್ ಸ್ಟಾರ್ ಅಭಿಮಾನಿಗಳು ಪ್ರತಿ ದಿನವೂ ಕೇರಳದ ಅಟ್ಟಪ್ಪಾಡಿಯಲ್ಲಿ ಕಾಯುತ್ತಿರೋದನ್ನು ನೋಡಿದ ರಜನಿಕಾಂತ್ ಜನರಿಗೆ ನಿರಾಶೆ ಮಾಡಬಾರದು ಅಂತ ಸೂಪರ್ ಐಡಿಯಾ ಮಾಡಿದ್ದಾರೆ. ತಮ್ಮ ಕಾರ್‌ನ ಸನ್‌ರೂಫ್‌ ಓಪನ್ ಮಾಡಿ ಅಲ್ಲಿಯೇ ನಿಂತುಕೊಂಡು ಎಲ್ಲ ಅಭಿಮಾನಿಗಳಿಗೂ ಕೈ ಬೀಸಿದ್ದಾರೆ.

ಸುಮ್ನೆ ಹಾಗೆ ಹೋಗಿ ಶೂಟಿಂಗ್ ಜಾಗದ ಹೊರಗೆ ನಿಂತರೆ ಸಾಕು. ಶೂಟಿಂಗ್ ಮುಗಿಸಿಕೊಂಡು ರಜನಿಕಾಂತ್ ಹೋಟೆಲ್‌ ರೂಮ್‌ಗೆ ಹೋಗುವಾಗ ಎಲ್ಲರಿಗೂ ದರ್ಶನ ಕೊಡ್ತಾರೆ. ತಮ್ಮ ಕಪ್ಪು ಬಣ್ಣದ ಕಾರ್‌ನ ಸನ್‌ರೂಫ್‌ ತೆಗೆದು ಎಲ್ಲರಿಗೂ ಕೈಬೀಸುತ್ತಾರೆ. ರಜನಿಕಾಂತ್ ಅವರ ಈ ಒಂದು ವಿಡಿಯೋ ಎಲ್ಲೆಡೆ ಇದೀಗ ವೈರಲ್ ಆಗುತ್ತಿದೆ. ಇದನ್ನ ನೋಡಿದ ಅಭಿಮಾನಿಗಳು ಖುಷಿ ಆಗಿದ್ದಾರೆ.

ಜೈಲರ್ ಮೊದಲ ಭಾಗದಲ್ಲಿದ್ದ ಕಲಾವಿದರೇ ಇಲ್ಲೂ ಮುಂದುವರೆದಿದ್ದಾರೆ. ರಮ್ಯಾ ಕೃಷ್ಣ ಇಲ್ಲೂ ಜೈಲರ್ ರಜನಿಕಾಂತ್ ವೈಫ್ ಆಗಿಯೇ ಅಭಿನಯಿಸುತ್ತಿದ್ದಾರೆ. ಡೈರೆಕ್ಟರ್ ನೆಲ್ಸನ್ ದಿಲೀಪ್‌ಕುಮಾರ್ ತಮ್ಮ ಮೊದಲ ಭಾಗದ ಕಥೆಯನ್ನ ಈ ಪಾರ್ಟ್‌-2 ಚಿತ್ರದಲ್ಲೂ ಮುಂದುವರೆಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!