ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಯಾಂಡಲ್ವುಡ್ನ ದೊಡ್ಮನೆ ಹುಡುಗ ಯುವರಾಜ್ ಕುಮಾರ್ ಗೆ ಸಿನಿಮಾದಲ್ಲಿ ಸಾಕಷ್ಟು ಆಫರ್ ಗಳು ಬರ್ತಿವೆ. ಮೊದಲ ಚಿತ್ರ ಯುವ ರಿಲೀಸ್ ಆದ್ಮೇಲೆ ಈಗ ಮತ್ತೊಂದು ಚಿತ್ರ ‘ಎಕ್ಕ’ದ ಕೆಲಸ ಇನ್ನೂ ನಡೆಯುತ್ತಿದೆ. ಸಿನಿಮಾದ ಒಂದು ಹಾಡು ಈಗಾಗಲೇ ರಿಲೀಸ್ ಆಗಿ ಫುಲ್ ಸೌಂಡ್ ಮಾಡುತ್ತಿದೆ.
ಇದೆ ಟೈಮ್ ನಲ್ಲಿ ಮತ್ತೊಂದು ಸಿನಿಮಾ ಸುದ್ದಿ ಬರ್ತಿದೆ. ಅಕ್ಷಯ ತೃತೀಯ ದಿನವೇ ಈ ಸಿನಿಮಾ ಅನೌನ್ಸ್ ಆಗುತ್ತಿದೆ ಅನ್ನುವ ಸುದ್ದಿ ಇದೆ. ಈ ಸಿನಿಮಾವನ್ನ ದುನಿಯಾ ಸೂರಿ ಡೈರೆಕ್ಷನ್ ಮಾಡುತ್ತಿದ್ದಾರೆ ಎನ್ನುವ ನ್ಯೂಸ್ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಆದರೆ ಇದರ ಬಗ್ಗೆ ಯಾವುದೇ ಖಚಿತ ಮಾಹಿತಿ ಚಿತ್ರತಂಡದಿಂದಾಗಲಿ ನಿರ್ದೇಶಕರಿಂದಾಗಲಿ ಬಂದಿಲ್ಲ.
ಯುವರಾಜ್ ಕುಮಾರ್ ಎರಡನೇ ಚಿತ್ರ ‘ಎಕ್ಕ’ ದ ಬಗ್ಗೆ ಭಾರೀ ನಿರೀಕ್ಷೆಯಿದ್ದು, ಈ ಚಿತ್ರವನ್ನು ರೋಹಿತ್ ಪದಕಿ ಡೈರೆಕ್ಷನ್ ಮಾಡುತ್ತಿದ್ದಾರೆ. ಪಿಆರ್ಕೆ, ಜಯಣ್ಣ ಫಿಲ್ಮ್ಸ್, ಕೆಆರ್ಜಿ ಸಂಸ್ಥೆನೇ ಈ ಚಿತ್ರಕ್ಕೂ ದುಡ್ಡುಹಾಕುತ್ತಿದ್ದಾರೆ. ಈ ಮೂಲಕ ಮತ್ತೊಂದು ಚಿತ್ರವನ್ನ ಈ ಬ್ಯಾನ್ರಗಳು ಜಂಟಿ ಆಗಿಯೇ ನಿರ್ಮಿಸುತ್ತಿವೆ ಅಂತಲೇ ಸುದ್ದಿ ಇದೆ.