ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಂಧ್ರ ಪ್ರದೇಶದ ಉಪಮುಖ್ಯಮಂತ್ರಿ ಹಾಗೂ ನಟ ಪವನ್ ಕಲ್ಯಾಣ್ ಅಭಿನಯದ ‘ಉಸ್ತಾದ್ ಭಗತ್ ಸಿಂಗ್’ ಚಿತ್ರದ ಟೀಸರ್ ಬಿಡುಗಡೆಗೊಂಡಿದೆ. ರಾಜಕೀಯ ಜವಾಬ್ದಾರಿಗಳ ನಡುವೆ ಸಿನಿಮಾಗಳಲ್ಲೂ ತೊಡಗಿಸಿಕೊಂಡಿರುವ ಪವನ್ ಕಲ್ಯಾಣ್ ಅಭಿನಯದ ಈ ಚಿತ್ರಕ್ಕೆ ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಮೂಡಿದೆ.
ಸುಮಾರು 43 ಸೆಕೆಂಡುಗಳ ಟೀಸರ್‌ನಲ್ಲಿ ಪವನ್ ಕಲ್ಯಾಣ್ ಖಡಕ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ‘ಗಬ್ಬರ್ ಸಿಂಗ್’ ಶೈಲಿಯಲ್ಲೇ ಹಾಸ್ಯ ಮತ್ತು ಆಕ್ಷನ್ ಮಿಶ್ರಿತ ಪಾತ್ರದಲ್ಲಿ ಅವರು ಮಿಂಚಿದ್ದು, ಟೀಸರ್‌ನಲ್ಲಿ ಕೆಲವು ಪಂಚಿಂಗ್ ಡೈಲಾಗ್‌ಗಳು ಹಾಗೂ ಆಕ್ಷನ್ ದೃಶ್ಯಗಳು ಗಮನ ಸೆಳೆಯುತ್ತವೆ.
ಇದನ್ನೂ ಓದಿ:
ಈ ಚಿತ್ರವನ್ನು ನಿರ್ದೇಶಕ ಹರೀಶ್ ಶಂಕರ್ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಕನ್ನಡದ ನಟಿ ಶ್ರೀಲೀಲಾ ನಾಯಕಿಯಾಗಿ ಅಭಿನಯಿಸಿದ್ದು, ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡಿದೆ. ಮೊದಲು ಸಂಗೀತ ನಿರ್ದೇಶಕರಾಗಿ ದೇವಿ ಶ್ರೀ ಪ್ರಸಾದ್ ಹೆಸರು ಇದ್ದರೂ, ಟೀಸರ್‌ನಲ್ಲಿ ಎಸ್. ತಮನ್ ಅವರ ಹೆಸರು ಕಾಣಿಸಿಕೊಂಡಿದೆ.
ಮಾರ್ಚ್ 26ರಂದು ಬಿಡುಗಡೆಯಾಗಬೇಕಿದ್ದ ಈ ಚಿತ್ರವನ್ನು ಈಗ ಒಂದು ವಾರ ಮುಂಚಿತವಾಗಿ ಮಾರ್ಚ್ 19ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ‘ಟಾಕ್ಸಿಕ್’ ಚಿತ್ರದ ಬಿಡುಗಡೆ ದಿನಾಂಕ ಬದಲಾದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪವನ್ ಕಲ್ಯಾಣ್ ಉಪಮುಖ್ಯಮಂತ್ರಿಯಾದ ಬಳಿಕ ಬಿಡುಗಡೆಯಾಗುತ್ತಿರುವ ಮೂರನೇ ಚಿತ್ರ ಇದಾಗಿದೆ.



