February 3, 2026
Tuesday, February 3, 2026
spot_img

CINE | ಎಲ್ಲರಿಗೂ ಪ್ರೀತಿ ಸಿಗಲಿ ಅಂದಿದ್ದೇಕೆ ಮೃಣಾಲ್? ಡೇಟಿಂಗ್ ಗಾಸಿಪ್‌ ನಡುವೆ ನಟಿಯ ಅಂತರಾಳದ ಮಾತು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಿನಿಮಾ ಲೋಕದಲ್ಲಿ ಗಾಸಿಪ್‌ಗಳು ಸಾಮಾನ್ಯ, ಆದರೆ ಮೃಣಾಲ್ ಠಾಕೂರ್ ಮತ್ತು ಬಹುಭಾಷಾ ನಟ ಧನುಷ್ ಅವರ ಡೇಟಿಂಗ್ ವಿಚಾರ ಮಾತ್ರ ದಿನಕ್ಕೊಂದು ತಿರುವು ಪಡೆಯುತ್ತಿದೆ. ಇತ್ತೀಚೆಗೆ ‘ಸನ್ ಆಫ್ ಸರ್ದಾರ್ 2’ ಪ್ರೀಮಿಯರ್‌ನಲ್ಲಿ ಜೋಡಿಯಾಗಿ ಕಾಣಿಸಿಕೊಂಡಾಗಿನಿಂದ ಶುರುವಾದ ಈ ಗುಸುಗುಸು, ಈಗ ಮೃಣಾಲ್ ಅವರ ಹೊಸ ಹೇಳಿಕೆಯೊಂದಿಗೆ ಮತ್ತಷ್ಟು ಕಾವು ಪಡೆದಿದೆ.

ದುಲ್ಕರ್ ಸಲ್ಮಾನ್ ಜೊತೆಗಿನ ಎ.ಆರ್. ರೆಹಮಾನ್ ಸಂಯೋಜನೆಯ ‘ಬೀಗಿ ಬೀಗಿ..’ ಹಾಡಿನ ಪ್ರಚಾರದ ವೇಳೆ ಮೃಣಾಲ್ ಮನಬಿಚ್ಚಿ ಮಾತನಾಡಿದ್ದಾರೆ. “ಪ್ರೀತಿ ಎನ್ನುವುದು ಜಗತ್ತಿನ ಸುಂದರ ಭಾವನೆಗಳಲ್ಲಿ ಒಂದು. ಅದು ಮನುಷ್ಯನನ್ನು ಉತ್ತಮ ವ್ಯಕ್ತಿಯನ್ನಾಗಿ ರೂಪಿಸುವುದಷ್ಟೇ ಅಲ್ಲ, ನಮ್ಮೊಳಗಿನ ಮಗುವಿನಂತಹ ಮುಗ್ಧತೆಯನ್ನು ಕಾಪಾಡುತ್ತದೆ. ಈ ಭೂಮಿಯ ಪ್ರತಿಯೊಬ್ಬರಿಗೂ ಜೀವನದಲ್ಲಿ ಒಮ್ಮೆಯಾದರೂ ಪ್ರೀತಿ ಸಿಗಲೇಬೇಕು,” ಎಂದು ಅವರು ಆಶಿಸಿದ್ದಾರೆ.

ಇದನ್ನೂ ಓದಿ:

ಸೋಶಿಯಲ್ ಮೀಡಿಯಾದಲ್ಲಿ ಒಬ್ಬರಿಗೊಬ್ಬರು ಶುಭಾಶಯ ವಿನಿಮಯ ಮಾಡಿಕೊಳ್ಳುವುದು ಮತ್ತು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುವುದು ಅಭಿಮಾನಿಗಳ ಅನುಮಾನಕ್ಕೆ ಪುಷ್ಟಿ ನೀಡಿದೆ. ಮೃಣಾಲ್ ಮತ್ತು ಧನುಷ್ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದರೂ, ನಟಿ ಮಾತ್ರ “ಪ್ರೀತಿ ಪ್ರಾರ್ಥನೆ”ಯಲ್ಲೇ ಮುಳುಗಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !